ನ್ಯೂಯಾರ್ಕ್: ಅಮೇರಿಕಾ ಮೂಲದ 64 ವರ್ಷದ ಮಹಿಳೆಯೊಬ್ಬರು ಸೂಸೈಡ್ ಪಾಡ್ ಬಳಸಿ ಸಾವಿಗೆ ಶರಣಾಗಿದ್ದಾರೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ. ವಿಶ್ವದಲ್ಲೇ 'ಸೂಸೈಡ್ ಪಾಡ್' ಯಂತ್ರವನ್ನು ಬಳಸಿ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ. ಸ್ವಿಸ್ ಜರ್ಮನ್ ಗಡಿಯ ಸಮೀಪದಲ್ಲಿರುವ ಮೆರಿಚೌಸೆನ್ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಸೋಮವಾರ ಈ ಸೂಸೈಡ್ ಪಾಡ್ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಸೈಡ್ ಪಾಡ್ ಎಂದರೇನು?
ಸಾರ್ಕೋ ಪಾಡ್ ಒಂದು ವಿವಾದಾತ್ಮಕ ಸೂಸೈಡ್ ಪಾಡ್ ಆಗಿದೆ. ಇದನ್ನು ಆತ್ಮಹತ್ಯೆ ಕ್ಯಾಪ್ಸುಲ್ ಎಂದು ಸಹ ಕರೆಯುಲಾಗುತ್ತದೆ. ಇದರೊಳಗೆ ಒಬ್ಬರು ಪ್ರವೇಶಿಸಿ ಬಟನ್ ಒತ್ತಿದ ತಕ್ಷಣ ಸಾವು ಸಂಭವಿಸುತ್ತದೆ. ಈ ಸೂಸೈಡ್ ಪಾಡ್‌ನ್ನು ವ್ಯಕ್ತಿ ಯಾವುದೇ ನೋವಿಲ್ಲದೆ ಸುಲಭವಾಗಿ ಸಾಯುವಂತೆ ವಿನ್ಯಾಸಗೊಳಿಸಲಾಗಿದೆ. ಮೆಷಿನ್ ಒಳಗೆ ತೆರಳಿ ವ್ಯಕ್ತಿ ಆಸನದಲ್ಲಿ ಕುಳಿತುಕೊಳ್ಳುತ್ತಾನೆ. ನಂತರ ನೈಟ್ರೋಜನ್ ಆನ್ ಮಾಡುವ ಗುಂಡಿಯನ್ನು ಒತ್ತಲಾಗುತ್ತದೆ. ನಂತರ ವ್ಯಕ್ತಿಯು ನಿದ್ರಿಸುತ್ತಾನೆ ಮತ್ತು ಕೆಲವೇ ನಿಮಿಷಗಳಲ್ಲಿ ಉಸಿರುಗಟ್ಟಿ ಸಾಯುತ್ತಾನೆ. ಎಕ್ಸಿಟ್ ಇಂಟರ್‌ನ್ಯಾಷನಲ್ ಪ್ರಕಾರ, ಈ ಯಂತ್ರವನ್ನು ಅಭಿವೃದ್ಧಿಪಡಿಸಲು 1 ಮಿಲಿಯನ್‌ಗಿಂತಲೂ ಹೆಚ್ಚು ವೆಚ್ಚದ 3D ಮುದ್ರಿತ ಸಾಧನವನ್ನು ಬಳಸಲಾಗಿದೆ.
ಈ ಯಂತ್ರದಿಂದ ವ್ಯಕ್ತಿಗಳು ಸಾಯುವುದು ಹೇಗೆ?
ಸ್ವಿಟ್ಜರ್ಲೆಂಡ್ನಲ್ಲಿ ಅಸಿಸ್ಟೆಡ್ ಡೈಯಿಂಗ್ ದಶಕಗಳಿಂದ ಕಾನೂನುಬದ್ಧವಾಗಿದೆ. ಆದರೆ, ದಯಾಮರಣ ವಿರೋಧಿಗಳು ಈ ಯಂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಿಸ್ಟೆಡ್ ಡೈಯಿಂಗ್ ಗ್ರೂಪ್ ದಿ ಲಾಸ್ಟ್ ರೆಸಾರ್ಟ್ ಸಂಸ್ಥೆಯು ಜುಲೈನಲ್ಲಿ ಜ್ಯೂರಿಚ್‌ನಲ್ಲಿ ಸಾರ್ಕೋ ಪಾಡ್ ಅನ್ನು ಪ್ರಸ್ತುತಪಡಿಸಿತು. ಈ ಕ್ಯಾಪ್ಸೂಲ್ನಲ್ಲಿ ಆಮ್ಲಜನಕ ಮಟ್ಟ ತೀರಾ ಕಡಿಮೆಯಾಗಿ ಹೈಪೋಕ್ಸಿಯಾ (ಜೀವಕೋಶಕ್ಕೆ ಆಮ್ಲಜನಕ ಲಭ್ಯತೆ ಕುಸಿಯುವುದು) ಮೂಲಕ ಸಾವು ಬರುತ್ತದೆ.
ಯಾವುದೇ ಬಾಹ್ಯ ನೆರವು ಇಲ್ಲದೆ ವ್ಯಕ್ತಿ ತನ್ನ ಜೀವವನ್ನು ತೆಗೆದುಕೊಳ್ಳುವವರೆಗೂ ಸ್ವಿಸ್ ಕಾನೂನು ಸಹಾಯಕ ಆತ್ಮಹತ್ಯೆಗೆ ಅವಕಾಶ ನೀಡುತ್ತದೆ. ಆದರೆ ವ್ಯಕ್ತಿಗೆ ಸಾಯಲು ಸಹಾಯ ಮಾಡುವುದು ಅಪರಾಧವಾಗಿದೆ. ವ್ಯಕ್ತಿ ಸಾಯಲು ಸಹಾಯ ಮಾಡುವವರು ಯಾವುದೇ ಸ್ವ-ಉದ್ದೇಶಕ್ಕಾಗಿ ಹೀಗೆ ಮಾಡುತ್ತಾರೆ ಎಂದು ಸರ್ಕಾರಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಸಾರ್ಕೊ ಬಳಕೆಯ ಚಿತ್ರಗಳನ್ನು ತೆಗೆಯಲು ಬಯಸಿದ ತನ್ನ ಛಾಯಾಗ್ರಾಹಕರಲ್ಲಿ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಚ್ ಪತ್ರಿಕೆ ವೋಕ್ಸ್‌ಕ್ರಾಂಟ್ ವರದಿ ಮಾಡಿದೆ. ಛಾಯಾಗ್ರಾಹಕನನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಶಾಫ್‌ಹೌಸೆನ್ ಪೊಲೀಸರು ಸೂಚಿಸಿದ್ದಾರೆ
Disclaimer: ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯಾಗಿದ್ದು, ಅದರಲ್ಲಿ ತಿಳಿಸಿದಂತೆ ಇಲ್ಲಿ ಮಾಹಿತಿ ನೀಡಲಾಗಿದೆ.