ತಿರುವನಂತಪುರ: ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿ ಪಿಂಚಣಿ ಫಲಾನುಭವಿಗಳಿಗೆ ಎರಡು ಕಂತುಗಳ ಕಲ್ಯಾಣ ಪಿಂಚಣಿ ಸಿಗಲಿದೆ. ಇದಕ್ಕಾಗಿ 1700 ಕೋಟಿ ಮೀಸಲಿಡಲಾಗಿದೆ ಎಂದು ವಿತ್ತ ಸಚಿವ ಕೆಎನ್ ಬಾಲಗೋಪಾಲ್ ಘೋಷಿಸಿದ್ದಾರೆ.
ಸುಮಾರು 62 ಲಕ್ಷ ಮಂದಿ ಓಣಂಗೆ ತಲಾ 3200 ರೂ. ಪಿಂಚಣಿ ಲಭ್ಯವಾಗಲಿದೆ. ಪ್ರಸ್ತುತ ವಿತರಿಸಲಾಗುತ್ತಿರುವ ಒಂದು ಕಂತಿನ ಜೊತೆಗೆ ಇನ್ನೂ ಎರಡು ಕಂತುಗಳು ಮಂಜೂರಾಗಿದೆ. ಬುಧವಾರದಿಂದ ಫಲಾನುಭವಿಗಳಿಗೆ ತಲುಪಲಿದೆ. ಈ ಮೊತ್ತವು 26.62 ಲಕ್ಷ ಜನರ ಬ್ಯಾಂಕ್ ಖಾತೆಗಳಿಗೆ ತಲುಪಲಿದೆ. ಇತರರಿಗೆ ಪಿಂಚಣಿಯನ್ನು ಸಹಕಾರಿ ಬ್ಯಾಂಕ್‍ಗಳ ಮೂಲಕ ವರ್ಗಾಯಿಸಲಾಗುವುದು.
ಮಂಜೂರಾದ ಎರಡು ಕಂತುಗಳ ಹೊರತು ಒಂದು ಕಂತು ಬಾಕಿ ಇದೆ. ನಗದು ಕೊರತೆಯಿಂದ ಬಾಕಿ ಉಳಿದಿರುವ ಕಲ್ಯಾಣ ಪಿಂಚಣಿಯನ್ನು ಈ ವರ್ಷ ಮತ್ತು ಮುಂದಿನ ವರ್ಷ ಪಾವತಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದರು.