ನಾಮಕ್ಕಲ್: ತ್ರಿಶೂರ್‍ನಲ್ಲಿ ಎಟಿಎಂ ದರೋಡೆಕೋರರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ತಮಿಳುನಾಡಿನ ನಾಮಕ್ಕಲ್‍ನ ಕುಮಾರಪಾಳ್ಯಂನಲ್ಲಿ ತಮಿಳುನಾಡು ಪೋಲೀಸರು ಬಂಧಿಸಿದ್ದಾರೆ.
ಬಂಧಿತರು ಹರಿಯಾಣ ಮೂಲದವರು. ದರೋಡೆಕೋರರು ಕದ್ದ ಹಣದೊಂದಿಗೆ ಕಂಟೈನರ್‍ನಲ್ಲಿ ತೆರಳುತ್ತಿದ್ದರು. ಮಾರಕಾಸ್ತ್ರಗಳೊಂದಿಗೆ ತೆರಳುತ್ತಿದ್ದ ದರೋಡೆಕೋರರ ತಂಡವನ್ನು ಪೆÇಲೀಸರು ಬಗ್ಗುಬಡಿದಿದ್ದಾರೆ. ಕಾರ್ಯಾಚರಣೆಯ ಎನ್‍ಕೌಂಟರ್‍ನಲ್ಲಿ ಗುಂಪಿನಲ್ಲೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಪೋಲೀಸರು ಗಾಯಗೊಂಡಿದ್ದಾರೆ.
ಇನ್ಸ್ ಪೆಕ್ಟರ್ ತವಮಣಿ ಮತ್ತು ರಂಜಿತ್ ಕುಮಾರ್ ಗಾಯಗೊಂಡಿದ್ದಾರೆ. ದರೋಡೆಕೋರರ ತಂಡದಲ್ಲಿ ಆರು ಜನರಿದ್ದು, ಎಲ್ಲರೂ ಹರಿಯಾಣ ಮೂಲದವರಾಗಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಕಂಟೈನರ್ ನಲ್ಲಿ ಹಣ ಸಾಗಿಸುತ್ತಿದ್ದರು. ಪೆÇಲೀಸರ ಪ್ರಕಾರ, ದರೋಡೆ ತಂಡದ ಬಳಿ ಕೋವಿ ಕೂಡ ಇತ್ತೆನ್ನಲಾಗಿದೆ.
ಈ ಹಿಂದೆ ಕಣ್ಣೂರು ಸೇರಿದಂತೆ ಹಲವು ಕಡೆ ಲೂಟಿ ಮಾಡಿದ್ದು ಇದೇ ತಂಡ ಎಂದು ಪೋಲೀಸರು ತಿಳಿಸಿದ್ದಾರೆ.
ದರೋಡೆ ತಂಡ ಪ್ರಯಾಣಿಸುತ್ತಿದ್ದ ಕಂಟೈನರ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರೊಂದಿಗೆ ನಾಮಕಲ್ ಪೋಲೀಸರು ಕಂಟೈನರ್ ಲಾರಿಯನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಇವರಿಂದ ಎಟಿಎಂನಿಂದ ಕಳವು ಮಾಡಿದ್ದ 65 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ ತ್ರಿಶೂರಿನ ವಿವಿಧೆಡೆ ಎಟಿಎಂಗಳನ್ನು ಲೂಟಿ ಮಾಡಲಾಗಿತ್ತು. ಮಾಪ್ರಾಣಂ, ಕೊಲಾಜಿ ಮತ್ತು ಶೋರ್ನೂರು ರಸ್ತೆಯಲ್ಲಿರುವ ಎಟಿಎಂಗಳಲ್ಲಿ ಲೂಟಿ ನಡೆದಿದೆ. ಬೆಳಗಿನ ಜಾವ ಮೂರರಿಂದ ನಾಲ್ಕು ಗಂಟೆಯ ನಡುವೆ ಈ ಘಟನೆ ನಡೆದಿದೆ.