ಬದಿಯಡ್ಕ: ಕೊಲ್ಲಂಗಾನ ಅರ್ತಲೆ ಶ್ರೀ ರಕ್ತೇಶ್ವರಿ ನಾಗ ಗುಳಿಗ ನೂತನ ಕ್ಷೇತ್ರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಅರ್ತಲೆ ಕ್ಷೇತ್ರದ ಪರಿಸರದಲ್ಲಿ ನಡೆಯಿತು.
ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಪ್ರೊ.ಎ. ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಮಿತಿ ಅಧ್ಯಕ್ಷ ಸುಬ್ಬಣ್ಣ ನಾಯ್ಕ್ ಅರ್ತಲೆ, ಮಧೂರು ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಕೃಷ್ಣ ಪ್ರಸಾದ ಚಿತ್ತಾರಿ, ಗಣೇಶಕೃಷ್ಣ ಅಳಕ್ಕೆ, ಗೋಪಾಲಕೃಷ್ಣ, ಶ್ಯಾಮ್ ಪ್ರಸಾದ್ ಮೇಗಿನಡ್ಕ, ಸುಕುಮಾರ ಕುದ್ರೆಪ್ಪಾಡಿ, ಮಾಧವ ಮಾಸ್ತರ್ ಕೂಡ್ಲು, ನಾರಾಯಣ ನಾಯರ್ ಕಲ್ಲಕಟ್ಟ ಮಾತನಾಡಿ ಸಮಿತಿ ರಚನೆಗೆ ಸಲಹೆಗಳನ್ನು ನೀಡಿದರು.
ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಮುಖ್ಯ ರಕ್ಷಾಧಿಕಾರಿಗಳಾಗಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಹಾಗೂ ರಕ್ಷಾಧಿಕಾರಿಗಳಾಗಿ ವೇದಮೂರ್ತಿ ಗಣೇಶ ಭಟ್ ಮುಂಡೋಡು, ಸುರೇಂದ್ರ ಕೆಎಸ್‍ಇಬಿ, ರಾಮ ಕಾರ್ಮಾರು, ಶ್ಯಾಮ ಭಟ್ ಕಲ್ಲಕಟ್ಟ ಅವರನ್ನು ಆರಿಸಲಾಯಿತು. ಗೌರವ ಸಲಹೆಗಾರರಾಗಿ ವೆಂಕಪ್ಪ ನಾಯ್ಕ ಬೊಂದೆಲ್, ಮಹೇಶ್ ವಳಕುಂಜ, ಶೋಭಾ ಗೋಪಾಲನ್, ವೆಂಕಪ್ಪ ನಾಯ್ಕ್ ಅರ್ತಲೆ ಅವರನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ನಾರಾಯಣ ಭಟ್ ಪಾಡಿ ಕಲ್ಲಕಟ್ಟ, ಅಧ್ಯಕ್ಷರಾಗಿ ಪ್ರೊ.ಎ. ಶ್ರೀನಾಥ ಕೊಲ್ಲಂಗಾನ, ಸಂಚಾಲಕರಾಗಿ ಸುಬ್ಬಣ್ಣ ನಾಯ್ಕ್ ಅರ್ತಲೆ, ಸಹಸಂಚಲಕರಾಗಿ ರಮೇಶ್ ಅರ್ತಲೆ, ಕಾರ್ಯಾಧ್ಯಕ್ಷರಾಗಿ ಪ್ರಮೋದ್ ಕುಮಾರ್ ಕೊಲ್ಲಂಗಾನ, ಪ್ರಧಾನ ಕಾರ್ಯದರ್ಶಿಯಾಗಿ ವೇಣುಗೋಪಾಲ ಅರ್ತಲೆ, ಖಜಾಂಜಿಯಾಗಿ ಐತಪ್ಪ ನಾಯ್ಕ್ ಮದರ್ಂಬೈಲು, ಆದರ್ಶ್ ಅರ್ತಲೆ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ರಾಜೇಶ್ವರಿ ನಾರಾಯಣ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಸುಲೋಚನಾ ಗೋವಿಂದ ನಾಯ್ಕ ಇವರನ್ನು ಆಯ್ಕೆ ಮಾಡಲಾಯಿತು. ಗಣ್ಯ ವ್ಯಕ್ತಿಗಳನ್ನು ಒಳಗೊಂಡ ಪ್ರಧಾನ ಸಮಿತಿ ಹಾಗೂ ಉಪಸಮಿತಿಗಳನ್ನು ರಚಿಸಲಾಯಿತು. ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ವಂದಿಸಿದರು.