HEALTH TIPS

ಒಂದು ದೇಶ, ಒಂದು ಚುನಾವಣೆ ಅಪಾಯಕಾರಿ: ನಟ ಕಮಲ್‌ ಹಾಸನ್‌

 ಚೆನ್ನೈ: ಒಂದು ದೇಶ, ಒಂದು ಚುನಾವಣೆ ಪ್ರಸ್ತಾವನೆಯು ಅಪಾಯಕಾರಿಯಾಗಿದ್ದು, ದೋಷಪೂರಿತವಾಗಿದೆ. ಅದರ ಗುರುತುಗಳು ಇನ್ನೂ ಕೆಲವು ದೇಶಗಳಲ್ಲಿ ಅಸ್ತಿತ್ವದಲ್ಲಿದೆ. ದೇಶಕ್ಕೆ ಅದರ ಅಗತ್ಯವಿಲ್ಲ ಮತ್ತು ಭವಿಷ್ಯದಲ್ಲಿಯೂ ಅದರ ಅವಶ್ಯಕತೆ ಇಲ್ಲ ಎಂದು ಮಕ್ಕಳ್ ನೀತಿ ಮಯ್ಯಂ ಪಕ್ಷದ ಮುಖ್ಯಸ್ಥ, ಬಹುಭಾಷಾ ನಟ ಕಮಲ್‌ ಹಾಸನ್‌ ತಿಳಿಸಿದ್ದಾರೆ.

ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, '2014 ಅಥವಾ 2015ರಲ್ಲಿ ಏಕಕಾಲಕ್ಕೆ ಚುನಾವಣೆ ನಡೆದಿದ್ದರೆ, ಸರ್ವಾಧಿಕಾರ, ವಾಕ್‌ ಸ್ವಾತಂತ್ರ್ಯದ ನಷ್ಟ ಮತ್ತು ಏಕ ನಾಯಕನ ಪ್ರಾಬಲ್ಯಕ್ಕೆ ಕಾರಣವಾಗುತ್ತಿತ್ತು ಎಂದು ಯಾವುದೇ ಪಕ್ಷದ ಮತ್ತು ನಾಯಕನ ಹೆಸರು ಉಲ್ಲೇಖಿಸದೆ ಕಮಲ್‌ ಹಾಸನ್‌ ಹೇಳಿದ್ದಾರೆ.

'ನಾವು ಅದರಿಂದ ಪಾರಾಗಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಕೊರೊನಾ ವೈರಸ್‌ಗಿಂತಲೂ ತೀವ್ರವಾದ ಕಾಯಿಲೆಯಿಂದ ಪಾರಾಗಿದ್ದೇವೆ' ಎಂದು ತಿಳಿಸಿದರು.

ಎಲ್ಲಾ ಟ್ರಾಫಿಕ್‌ ದೀಪಗಳು ಒಂದೇ ಬಣ್ಣದಲ್ಲಿ ಒಂದೇ ಸಮಯದಲ್ಲಿ ಹೊಳೆಯುತ್ತಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಜನರು ಯೋಚಿಸಲು ಮತ್ತು ಅವರ ಆಯ್ಕೆಗಳನ್ನು ಆರಿಸಿಕೊಳ್ಳಲು ಸಮಯ ನೀಡಬೇಕು ಎಂದು ಕಮಲ್‌ ಹಾಸನ್‌ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries