ಕಾಸರಗೋಡು: ನಗರಸಭಾ 20ನೇ ಡಿವಿಶನ್ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಕಾರ್ಯನಿರ್ವಹಿಸುತ್ತಿರುವ ಪಡಿತರ ಡಿಪೆÇೀ ನಂ.2468068 ಮತ್ತು ಕಾಸರಗೋಡು ರೈಲ್ವೆ ನಿಲ್ದಾಣದ ಸನಿಹದ ತಾಯಲಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಡಿತರ ಸಂಖ್ಯೆ.2468072ಡಿಪೆÇೀ ಮತ್ತು ಕಾಯಂ ಪರವಾನಗಿದಾರರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಲ್ಲಿಕಾರ್ಜುನ ದೇವಸ್ಥಾನ ಸನಿಹದ 2468068 ನೇ ಸಂಖ್ಯೆಯ ರೇಷನ್ ಡಿಪೆÇೀ ಅಂಗವಿಕಲರ ಮೀಸಲಾತಿಯಾಗಿದ್ದು, ತಾಯಲಂಗಡಿಯಲ್ಲಿ ಚಟುವಟಿಕೆ ನಡೆಸುತ್ತಿರುವ 2468072ನೇ ಸಂಖ್ಯೆಯ ರೇಷನ್ ಡಿಪೆÇೀ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರಿಸಲಾಗಿದೆ.
ಆಯಾ ಮೀಸಲು ವರ್ಗಗಳ ವ್ಯಕ್ತಿಗಳು, ಸಹಕಾರಿ ಸಂಸ್ಥೆಗಳು ಮತ್ತು ಮಹಿಳಾ ಸಂಸ್ಥೆಗಳು ಮಾತ್ರ ಮೀಸಲಾತಿ ವರ್ಗಗಳಿಗೆ ಅಧಿಸೂಚಿಸಲಾದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೇ ದಿನಾಂಕವಾಗಿದ್ದು, ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ(04994 255138)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.