ಕೊಚ್ಚಿ: ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎಫ್ ಆರ್.ಐ) ಇಂದು ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಕೊಚ್ಚಿ ಕರಾವಳಿಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದೆ.
ಜಾಗೃತಿ ಮೂಡಿಸುವ ಉದ್ದೇಶದಿಂದ ಸಿಎಂಎಫ್‍ಆರ್‍ಐ ಸಂಶೋಧನಾ ನೌಕೆಯಲ್ಲಿ ಟ್ರಾಲ್‍ನೆಟ್‍ಗಳು ಮತ್ತು ಹ್ಯಾಂಡ್‍ನೆಟ್‍ಗಳನ್ನು ಬಳಸಿ ಸ್ವಚ್ಛಗೊಳಿಸಲಾಯಿತು.
ಸಮುದ್ರದಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಕಸ ಸೇರಿದಂತೆ ಇತರ ಕಸವನ್ನು ಬಲೆ ಬಳಸಿ ತೆಗೆಯಲಾಯಿತು. ಕೊಪ್ಪಿಪಿಳ್ಳಿ ಬೀಚ್ ಕೂಡ ಸ್ವಚ್ಛಗೊಳಿಸಲಾಯಿತು. ಸಾಗರ ಜೀವವೈವಿಧ್ಯ ಪರಿಸರ ನಿರ್ವಹಣಾ ವಿಭಾಗದ ಅಡಿಯಲ್ಲಿ ವಿಜ್ಞಾನಿಗಳು, ಅಧಿಕಾರಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಬೀಚ್ ಕ್ಲೀನಪ್ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೂರನೇ ಶನಿವಾರದಂದು ಆಚರಿಸಲಾಗುತ್ತದೆ.