ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ತಜ್ಞವೈದ್ಯ ಡಾ.ಜನಾರ್ದನ ನಾಯ್ಕ್ ಸಿ ಎಚ್ ಅವರು ಮಂಗಳೂರಿನ ಯೇನೆಪೋಯ ವೈದ್ಯಕೀಯ ಕಾಲೇಜಿನಿಂದ "ಸಂಗೀತ ಚಿಕಿತ್ಸೆ" ಯಲ್ಲಿ ಸರ್ಟಿಫಿಕೇಟಿಗೆ ಅರ್ಹರಾದರು.
ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ, ಜರ್ಮನಿಯ ಡಾ. ಕೋರ್ಡುಲಾ ಡಯಟ್ರಿಚ್ ಅವರ ಸಮ್ಮುಖದಲ್ಲಿ, ಯೇನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ರಘುವೀರ ಅವರಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಸಂಗೀತ ಚಿಕಿತ್ಸಾತ್ಮಕ ಪದ್ಧತಿಯ ನಿರ್ದೇಶಕಿ ಪ್ರೊ.ವಿಜಯಲಕ್ಷ್ಮೀ, ಪ್ರೊ.ಪ್ರಭಾ ಅಧಿಕಾರಿ ಮತ್ತು ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಡಾ.ಜನಾರ್ದನ ಅವರು ಉತ್ತರ ಕೇರಳದಲ್ಲಿ, ಸಂಗೀತ ಚಿಕಿತ್ಸಾ ರಂಗದಲ್ಲಿ ಪ್ರಮಾಣ ಪತ್ರ ಪಡೆದ ಪ್ರಥಮ ವೈದ್ಯರಾಗಿದ್ದಾರೆ.