ಕುಂಬಳೆ: ಕುಂಬಳೆಯ ದಿ.ದಿನೇಶ್- ಮಲ್ಲಿಕಾ ದಂಪತಿ ಪುತ್ರ ಸುಹಾಸ್ ಕೆ. ಭಾರತೀಯ ಭೂಸೇನೆಯ ಆರ್ಟಿಲರಿ ವಿಭಾಗದಲ್ಲಿ ಲೆಪ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಚೆನ್ನೈಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರೈಸಿರುವ ಇವರು ಶಾರದಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಹಾಗೂ ಮೈಸೂರಿನ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಬಿ.ಇ. ಪದವಿ ಪಡೆದಿದ್ದರು. ಪ್ರಸ್ತುತ ಲಢಕ್ ನಲ್ಲಿ ನೇಮಕಾತಿ ಪಡೆದಿದ್ದಾರೆ. ಸುಹಾಸ್ ಕೆ ಅವರು ಕುಂಬಳೆಯ ಆದರ್ಶ ಅಧ್ಯಾಪಕ ದಿ.ದೇವಪ್ಪ ಮಾಸ್ತರರ ಮೊಮ್ಮಗ.