ಪೆರ್ಲ: ವಾಯ್ಸ್ ಆಫ್ ವಲ್ರ್ಡ್ ಮಲಯಾಳಿ ಕೌನ್ಸಿಲ್ ಈ ವರ್x ಅಧ್ಯಾಪಕ ದಿನದಂದು ಘೋಷಿಸಿದ "ಗುರು ಶ್ರೇಷ್ಠ" ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯಿಂದ ರಂಜಿತ್ .ಎ ಎಸ್ ಪೆರ್ಲ ಆಯ್ಕೆಗೊಂಡಿದ್ದಾರೆ.
ಈ ಪ್ರಶಸ್ತಿಯು ತಿರುವನಂತಪುರಜಲ್ಲಿ ಜರಗುವ ಸಮಾರಂಭದಲ್ಲಿ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ವಿತರಿಸಲಿರುವರು ಎಂದು ವಿ.ಡಬ್ಲ್ಯು ಎಂ ಸಿ ಚೆಯರ್ಮೆನ್ ಅಜಿತ್ ಪಿಳ್ಳೈ ತಿಳಿಸಿದ್ದಾರೆ.
ಪ್ರಸ್ತುತ ಕಾಸರಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಂಜಿತ್ ಅವರು ಕೇರಳ ಪೋಲೀಸ್ ಸೇವೆಯಲ್ಲಿ ಸರ್ಕಾರಿ ಸೇವೆಗೆ ಸೇರಿಕೊಂಡಿದ್ದರು.ಬಳಿಕ 2012 ರಲ್ಲಿ ಜಿ.ಯೆಚ್.ಎಸ್.ಎಸ್ ಪಾಂಡಿಯಲ್ಲಿ ಅಧ್ಯಾಪಕ ಸೇವೆಗೆ ನಿಯುಕ್ತಿಗೊಂಡರು. ಕ್ರೀಡೆ,ಕಲೆ,ಸಾಮಾಜಿಕ,ಸಾಂಸ್ಕøತಿಕ,ಕ್ರೀಡಾ ಒಕ್ಕೂಟಗಳ ಸಂಯೋಜನೆ ಮುಂತಾದ ಅಂಶಗಳನ್ನು ಇಟ್ಟುಕೊಂಡು ಇವರನ್ನು ಆಯ್ಕೆಮಾಡಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಪೆರ್ಲ ಅಪ್ಪಯಮೂಲೆ ನಿವಾಸಿ ,ಕಲಾವಿದ ಸುಂದರ ಅಪ್ಪ ಯಮೂಲೆ,ನಿವೃತ್ತ ಪಶುಸಂಗೋಪನಾ ಇಲಾಖೆ ಉದ್ಯೋಗಿ ಸುಶೀಲ ಕೊರತಿ ದಂಪತಿ ಪುತ್ರರಾದ ರಂಜಿತ್ ಎಣ್ಮಕಜೆ ಪಂಚಾಯತಿ ಪಡ್ರೆ ಗ್ರಾಮ ಅಪ್ಪಯಮೂಲೆಯಲ್ಲಿ ಪತ್ನಿ ಸವಿತಾ ಪರಕ್ಕಿಲ,ಮಗಳು ಆಯುಷ್ಮಿತ ಆರ್ ಶೌರಿಯವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.