ಕಾಸರಗೋಡು: ಮಾಲಿನ್ಯ ಮುಕ್ತ ನವ ಕೇರಳ ಜನಪರ ಅಭಿಯಾನದ ಅಂಗವಾಗಿ 2025 ಜನವರಿ 26 ರಂದು ಕಾಸರಗೋಡು ಜಿಲ್ಲೆಯನ್ನು ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗುವುದೆಂದೂ, ಅಕ್ಟೋಬರ್ 2 ರಂದು ಜಿಲ್ಲೆಯ 777 ವಾರ್ಡ್‍ಗಳಲ್ಲೂ ಮಾಲಿನ್ಯ ಮುಕ್ತ ಕಾರ್ಯಕ್ರಮ ನಡೆಸಲು ಯೋಜನಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಉದ್ಘಾಟನೆ ಪೈವಳಿಕೆಯಲ್ಲಿ ನಡೆಸಲಾಗುವುದು.
ಜನಪರ ಅಭಿಯಾನ ಸುಗಮವಾಗಿ ನಡೆಸಲು ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳು ಕ್ರಿಯಾತ್ಮಕವಾಗಿ ಕಾರ್ಯಾಚರಿಸಲಿದೆಯೆಂದೂ, ಅಕ್ಟೋಬರ್ 2 ರಂದು ಪ್ರತೀ ವಾರ್ಡ್‍ನಲ್ಲೂ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಸಾಧ್ಯವಾಗಬೇಕೆಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಹೇಳಿದರು.
ಜಿಲ್ಲಾ ಯೋಜನಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಜೋಯಿಂಟ್ ಡೈರೆಕ್ಟರ್ ಜೇಸನ್ ಮ್ಯಾಥ್ಯೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನವ ಕೇರಳ ಕ್ರಿಯಾ ಯೋಜನೆ ಜಿಲ್ಲಾ ಕೋರ್ಡಿನೇಟರ್ ಕೆ.ಬಾಲಕೃಷ್ಣನ್ ವಿಷಯ ಮಂಡಿಸಿದರು. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಾನವಾಜ್ ಪಾದೂರು, ಶುಚಿತ್ವ ಮಿಷನ್ ಜಿಲ್ಲಾ ಕೋರ್ಡಿನೇಟರ್ ಪಿ.ಜಯನ್, ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್, ಕುಟುಂಬಶ್ರೀ ಎಡಿಎಂ ಸಿಸಿಎಚ್ ಇಕ್ಬಾಲ್, ಜಿಲ್ಲಾ ಯೋಜನಾ ಅಧಿಕಾರಿ ಟಿ.ರಾಜೇಶ್, ಜಿಲ್ಲಾ ಯೋಜನಾ ಸಮಿತಿ ಸದಸ್ಯರಾದ ಎಸ್.ಎನ್.ಸರಿತಾ, ಗೀತಾ ಕೃಷ್ಣನ್, ಜಾಸ್ಮಿನ್, ಕಬೀರ್ ಚೆರ್ಕಳ, ನಜ್ಮಾ ರಫಿ, ಆರ್.ರೀತಾ, ನ್ಯಾಯವಾದಿ ಸಿ.ರಾಮಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.