ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಭಾಂಗಣದಲ್ಲಿ 2024 ಅಕ್ಟೋಬರ್ 3 ರಂದು ಉದ್ಘಾಟನೆಗೊಂಡು ನಿರಂತರ 10 ದಿನಗಳ ಕಾಲ ನಡೆಯಲಿರುವ " *ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2024.* ಕಾರ್ಯಕ್ರಮ ದ ಅಂಗವಾಗಿ ಅಕ್ಟೋಬರ್ 6ರಂದು ಅಪರಾಹ್ನ 3 ಗಂಟೆಯಿಂದ " *ಕಾಸರಗೋಡು ದಸರಾ ಕವಿಗೋಷ್ಠಿ'* ನಡೆಯಲಿದೆ. ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯ ಮತ್ತು ಸ್ಪಂದನ ಸಿರಿ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆಯುವ ಈ ಕವಿಗೋಷ್ಠಿಯಲ್ಲಿ ಮೊದಲು ಹೆಸರು ನೋಂದಾಯಿಸಿದ 20 ಮಂದಿಗೆ ಅವಕಾಶ ನೀಡಲಾಗಿದ್ದು, ಕವಿಗಳು ಭಕ್ತಿಪ್ರಧಾನ ಕವನಗಳನ್ನೇ ವಾಚಿಸಬೇಕು. ಕವಿಗಳಿಗೆ ಅಭಿನಂದನಾ ಪತ್ರ ಹಾಗೂ ಪುಸ್ತಕ ಉಡುಗೊರೆ ನೀಡಿ ಗೌರವಿಸಲಾಗುವುದು. ಆಸಕ್ತ ಕವಿಗಳು 9447490344 ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಬೇಕಾಗಿ ಪ್ರಕಟಣೆ ತಿಳಿಸಿದೆ. ಕವಿಗೋಷ್ಠಿಯ ನಂತರ ಉಪ್ಪಿನಂಗಡಿಯ ಸತ್ಯ ಶಾಂತ ಪ್ರತಿಷ್ಠಾನ ಅರ್ಪಿಸುವ ಶಾಂತಾ ಕುಂಟಿನಿ ಸಾರಥ್ಯದ "ಗಾನ ಲಹರಿ" ಕಾರ್ಯಕ್ರಮ ನಡೆಯಲಿದೆ.