HEALTH TIPS

ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಮೃತಮಹೋತ್ಸವ ಉದ್ಘಾಟನೆ

                   ಕುಂಬಳೆ: ಎಲ್ಲರ ಸಂಘಟಿತ ಸಹಕಾರೀ ಮನೋಭಾವದ ದುಡಿಮೆಯ ಫಲವಾಗಿ ಊರಿಗೆ ಬಲುದೊಡ್ಡ ಸಂಪತ್ತಾದ ಈ ಬ್ಯಾಂಕ್ ಇಂದು ಉನ್ನತ ಮಟ್ಟಕ್ಕೇರಿದೆ. ಗ್ರಾಹಕರು ಸಾಲ ಪಡೆಯುವುದು ಎಷ್ಟು ಮುಖ್ಯವೋ, ಸಾಲವನ್ನು ತೀರಿಸುವುದು ಅಷ್ಟೇ ಮುಖ್ಯ. ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಸಹಕಾರೀ ಸಿದ್ಧಾಂತಗಳಿಗೆ ಪೂರಕವಾಗಿ ಉತ್ತಮ ಕಾರ್ಯಚಟುವಟಿಕೆಗಳೊಂದಿಗೆ ಮುಂದುವರಿಯಬೇಕಾಗಿದೆ ಎಂದು ಕಾಸರಗೋಡು  ಕೋಓಪರೇಟಿವ್ ಸೊಸೈಟೀಸ್‍ನ ಡೆಪ್ಯೂಟಿ ರಿಜಿಸ್ಟ್ರಾರ್ ಚಂದ್ರನ್ ಯು. ತಿಳಿಸಿದರು.

              ಶನಿವಾರ ಬೆಳಗ್ಗೆ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‍ನ ಸಮನ್ವಯ ಸಭಾ ಭÀವನದಲ್ಲಿ ಜರಗಿದ ಬ್ಯಾಂಕ್ ನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 

               ಬ್ಯಾಂಕ್ ನ ಆಡಳಿತ ಸಮಿತಿ ಅಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು.ಕೇರಳ ರಾಜ್ಯ ಕೋಓಪರೇಟಿವ್ ಸಹಾಯಕ ನೊಂದಾವಣಾಕಾರಿ ರವೀಂದ್ರ ಎ. ಅವರು ಬ್ಯಾಂಕ್ ನ ಸಂಸ್ಥಾಪಕ ರಘುರಾಮ ಶೆಟ್ಟಿಯವರ ಭಾವಚಿತ್ರ ಅನಾವರಣಗೊಳಿಸಿದರು. ಪುತ್ತಿಗೆ ಗ್ರಾಮಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಅವರು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರನ್ನು ಸನ್ಮಾನಿಸಿದರು. ಮಾಜಿ ಅಧ್ಯಕ್ಷರು, ನಿರ್ದೇಶಕರು, ನಿವೃತ್ತ ಕಾರ್ಯದರ್ಶಿಗಳು ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿಗಳನ್ನು ಸಹಕಾರ ಭಾರತಿಯ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು ಗೌರವಿಸಿದರು. ಶಿವರಾಮ ಭಟ್ ಎಚ್., ಬೈಜು ರಾಜ್, ಎಸ್.ಎನ್.ರಾವ್., ವಿನೋದ್ ಕುಮಾರ್, ಪುತ್ತಿಗೆ ಗ್ರಾಮಪಂಚಾಯಿತಿ ಸದಸ್ಯರುಗಳಾದ ಅನಿತಾಶ್ರೀ, ಜನಾರ್ದನ ಪೂಜಾರಿ, ಕಾವ್ಯಶ್ರೀ, ಜಯಂತಿ ಶುಭಾಶಂಸನೆಗೈದರು. ಎಸ್. ಗೋಪಾಲಕೃಷ್ಣ ಭಟ್, ವಕೀಲ ಥೋಮಸ್ ಡಿಸೋಜ ಮಾತನಾಡಿದರು. ನಿವೃತ್ತ ಕಾರ್ಯದರ್ಶಿ ಕೃಷ್ಣ ಭಟ್ ಅಮ್ಮಂಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಎಚ್. ರಾಮ ಭಟ್ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ಶ್ಯಾಮರಾಜ ಡಿ.ಕೆ. ಸ್ವಾಗತಿಸಿ, ನಿದೇಶಕಿ ಲಕ್ಷ್ಮೀ ವಿ. ಭಟ್ ವಂದಿಸಿದರು. ತಜ್ಞ ಕೃಷಿಕ ಡಾ. ವೇಣುಗೋಪಾಲ ಕಳೆಯತ್ತೋಡಿ ಅವರು ಕಾಳುಮೆಣಸು ಕೃಷಿ ಮತ್ತು ನಿರ್ವಹಣೆ ಕುರಿತು ವಿಚಾರಗೋಷ್ಠಿ ಮಂಡಿಸಿದರು. ಸಹಕಾರ ಭಾರತಿಯ ರಾಷ್ಟ್ರೀಯ ಸಮಿತಿ ಸದಸ್ಯ ವಕೀಲ ಕರುಣಾಕರನ್ ನಂಬ್ಯಾರ್ ಅವರು ಸರ್ಕಾರದಿಂದ ಜನರಿಗೆ ಲಭಿಸುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ರಾಜೇಶ್ ಮಳಿ ಮಂಗಳಾ ಮ್ಯಾಜಿಕ್ ವಲ್ರ್ಡ್ ಮಂಗಳೂರು ಇವರಿಂದ ಇಂದ್ರಜಾಲ ಪ್ರದರ್ಶನ, ಸಂಜೆ ವಿಶಾಲ ಯಕ್ಷ ಬಳಗ ನಂದಳಿಕೆ ಕಾರ್ಕಳ ಇವರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ನಡೆಯಿತು.

            ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರನ್ನು ಹಾಗೂ ಮಾಜಿ ಅಧ್ಯಕ್ಷರು, ನಿರ್ದೇಶಕರು, ನಿವೃತ್ತ ಕಾರ್ಯದರ್ಶಿಗಳು ಹಾಗೂ ನಿವೃತ್ತ ಬ್ಯಾಂಕ್  ಉದ್ಯೋಗಿಗಳನ್ನು  ಗೌರವಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries