ತಿರುವನಂತಪುರಂ: ಖಾಸಗಿ ಬಸ್‍ಗಳ ನೌಕರರಿಗೆ ಸಮವಸ್ತ್ರ ಹಾಗೂ ನೇಮಿಂಗ್ ಸ್ಟಿಕ್ಕರ್ ಕಡ್ಡಾಯಗೊಳಿಸಲಾಗಿದೆ. ಈ ಹಿಂದೆಯೇ ಆದೇಶ ಹೊರಡಿಸಿದ್ದರೂ ಹಲವರು ಪಾಲನೆ ಮಾಡಿಲ್ಲ.
ಖಾಸಗಿ ಬಸ್‍ಗಳ ಕಂಡಕ್ಟರ್‍ಗಳು ನೇಮ್ ಸ್ಟಿಕ್ಕರ್ ಧರಿಸಿರಬೇಕು ಎಂಬ ಆದೇಶ 12 ವರ್ಷಕ್ಕಿಂತ ಹಳೆಯದಾದರೂ ಇನ್ನೂ ಜಾರಿಯಾಗಿಲ್ಲ. ಈ ಸಂಬಂಧ 2011ರ ಮಾರ್ಚ್‍ನಲ್ಲಿ ಆದೇಶ ಹೊರಡಿಸಲಾಗಿತ್ತು. ಬಸ್ ಪ್ರಯಾಣಿಕರು ತಮಗೆ ಕೆಟ್ಟ ಅನುಭವ ಉಂಟಾದ ಸಂದರ್ಭಗಳಲ್ಲಿ ಸಿಬ್ಬಂದಿ ವಿರುದ್ಧ ದೂರು ನೀಡಲು ಕಂಡಕ್ಟರ್ ಹೆಸರನ್ನಾದರೂ ಗುರುತಿಸಬಹುದು ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಕಠಿಣ ನಿಲುವಿಗೆ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಸಾರಿಗೆ ಆಯುಕ್ತರಿಗೆ ಸೂಚನೆ ನೀಡಿದರು. ಚಾಲಕರು ಮತ್ತು ಕಂಡಕ್ಟರ್‍ಗಳು ನಿಗದಿತ ಮಾನದಂಡಗಳ ಪ್ರಕಾರ ಸಮವಸ್ತ್ರ ಧರಿಸುತ್ತಿದ್ದಾರೆಯೇ ಎಂದು ಗಮನಿಸಲು ಮೋಟಾರು ವಾಹನ ಇಲಾಖೆಯೂ ವಿಶೇಷ ತಪಾಸಣೆಗೆ ಸಿದ್ಧತೆ ನಡೆಸಿದೆ. ಶಿಕ್ಷಣ ಸಂಸ್ಥೆಗಳ ಬಸ್‍ಗಳನ್ನೂ ತಪಾಸಣೆ ನಡೆಸಲಾಗುತ್ತದೆ.