ತಿರುವನಂತಪುರಂ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್‍ಗೆ ತಿರುವನಂತಪುರಂನಿಂದ ಬೆಂಗಳೂರಿಗೆ ದಾಟಲು ಎಡಿಜಿಪಿ ಸಹಾಯ ಮಾಡಿದ್ದಾರೆ ಎಂಬುದು ಖಚಿತಗೊಂಡಿದೆ .
ಎಂ.ಆರ್. ಅಜಿತ್ ಕುಮಾರ್ ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಕಟ್ಟುನಿಟ್ಟಾದ ಪ್ರಯಾಣ ನಿಬರ್ಂಧಗಳು ಮತ್ತು ಪೆÇಲೀಸ್ ತಪಾಸಣೆ ಇದ್ದಾಗ ಸ್ವಪ್ನಾ ಸುರೇಶ್ ಬೆಂಗಳೂರು ಪ್ರವೇಶಿಸಲು ನೆರವಾಗಿದ್ದರು ಎಂದು ಸರಿತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತೊಬ್ಬ ಆರೋಪಿ ಸಂದೀಪ್ ಸ್ವಪ್ನಾ ಜೊತೆ ಬೆಂಗಳೂರಿಗೆ ಹೋಗಿದ್ದ. ಎಂ.ಅಜಿತಕುಮಾರ್ ಎಲ್ಲ ನೆರವು ನೀಡಿದ್ದರು. ಕೇರಳವನ್ನು ತೊರೆಯುವಂತೆ ಒತ್ತಾಯಿಸಿದ್ದು ಶಿವಶಂಕರ್ ಎಂದು ಸರಿತ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಿಂದ ನಾಗಾಲ್ಯಾಂಡ್‍ಗೆ ಹೋಗುವ ಯೋಜನೆ ಇತ್ತು. ಆ ಪ್ರವಾಸದಲ್ಲಿ ತನ್ನನ್ನು ನಿರ್ಮೂಲನೆ ಮಾಡಲು ಸಂಚು ನಡೆದಿದೆ ಎಂದೂ ಸ್ವಪ್ನಾ ಸುರೇಶ್ ಆರೋಪಿಸಿದ್ದರು.
ಶಿವಶಂಕರ್ ಅವರು ಸೂಚಿಸಿದ ಮಾರ್ಗದ ಮೂಲಕ ರಾಜ್ಯದಿಂದ ಕಾಲ್ಕೀಳಲಾಗಿತ್ತು. ಅಜಿತ್‍ಕುಮಾರ್ ಅವರು ಯಾವ ಚೆಕ್ ಪೋಸ್ಟ್ ಮೂಲಕ ನಿರ್ಗಮಿಸಬೇಕೆಂದು ಸೂಚಿಸಿದ್ದರು. ವರ್ಕಲದ ರೆಸಾರ್ಟ್‍ನಲ್ಲಿ ತಲೆಮರೆಸಿಕೊಂಡಿರುವುದಾಗಿ ಶಿವಶಂಕರ್ ಹೇಳಿರುವುದಾಗಿ ಸರಿತ್ ಹೇಳಿದ್ದಾರೆ.
ಎ.ಡಿ.ಜಿ.ಪಿ.ಅಜಿತ್ ಕುಮಾರ್ ಶಿವಶಂಕರ್ ಅವರಿಗೆ ಪೆÇಲೀಸರಿಂದ ಸಕಲ ನೆರವು ನೀಡಿದ್ದರು. . ಅಜಿತ್‍ಕುಮಾರ್ ಅವರನ್ನು ನೇರವಾಗಿ ಪರಿಚಯವಿಲ್ಲ. ಬೆಂಗಳೂರಿಗೆ ಪ್ರಯಾಣಿಸುವಾಗ ಪೆÇಲೀಸ್ ತಪಾಸಣೆ ತಪ್ಪಿಸಲು ಉನ್ನತ ಮಟ್ಟದ ಮಧ್ಯಸ್ಥಿಕೆ ಇತ್ತು. ಅಜಿತ್ ಕುಮಾರ್ ಆಗಿರುವ ಸಾಧ್ಯತೆ ಇದೆ ಎಂದು ಸ್ವಪ್ನಾ ಸುರೇಶ್ ತಿಳಿಸಿದ್ದಾರೆ.