HEALTH TIPS

ಗ್ಯಾಸ್‌ ಬರ್ನರ್‌ ಕೊಳಕಾಗಿ ಸ್ವಚ್ಛಗೊಳಿಸಲು ಕಷ್ಟಪಡುತ್ತಿದ್ದೀರಾ: ಈ ಟ್ರಿಕ್ಸ್‌ ಬಳಸಿ, ನಿಮ್ಮ ಸಮಯ ಉಳಿಯುತ್ತದೆ

 ಡುಗೆಮನೆಯ ಸ್ವಚ್ಛತೆ ಇದು ಮಹಿಳೆಯರಿಗೆ ಅತಿ ಹೆಚ್ಚು ಸಮಯ ತಗಲುವ ಕೆಲಸ. ಇಲ್ಲಿ ಪಾತ್ರೆ, ಕಿಚನ್‌ ಸಿಂಕ್‌, ಕಟ್ಟೆ ಇವೆಲ್ಲವುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಲೇಬೇಕು. ಇಲ್ಲವಾದರೆ ಅಡುಗೆಮನೆಯಲ್ಲಿ ಕೊಳಕು ತುಂಬುತ್ತದೆ. ಹಾಗಾಗಿ ಎಲ್ಲ ಮಹಿಳೆಯರು ಅಡುಗೆಮನೆಯ ಸ್ವಚ್ಛತೆಗೆ ಹೆಚ್ಚು ಗಮನಕೊಡುತ್ತಾರೆ.

ಆದರೆ ಅವುಗಳಲ್ಲಿ ಕೆಲವನ್ನು ಸ್ವಚ್ಛಗೊಳಿಸಲು ಕಡಿಮೆ ಸಮಯ ಹಿಡಿದರೆ, ಉಳಿದವುಗಳನ್ನು ಸ್ವಚ್ಛಗೊಳಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅವುಗಳಲ್ಲಿ ಕಪ್ಪಾದ ಗ್ಯಾಸ್‌ ಸ್ಟವ್‌ ಬರ್ನರ್‌ ಕೂಡಾ ಒಂದು. ಎಲ್ಲವನ್ನು ಸ್ವಚ್ಛಗೊಳಿಸುವ ಮಹಿಳೆಯರು ಇದನ್ನು ಸ್ವಚ್ಛಗೊಳಿಸಲು ಮರೆತು ಬಿಡುತ್ತಾರೆ. ದೀರ್ಘಕಾಲದವರೆಗೆ ಬರ್ನರ್‌ ಸ್ವಚ್ಛಗೊಳಿಸುವುದನ್ನು ನಿರ್ಲಕ್ಷಿಸಿದರೆ, ಅವುಗಳ ರಂದ್ರದಲ್ಲಿ ಕೊಳಕು ಸಂಗ್ರಹವಾಗುತ್ತದೆ. ಇದರಿಂದ ಅವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ಬೆಂಕಿ ಸರಿಯಾಗಿ ಹೊರಬರದೇ ಗ್ಯಾಸ್‌ ಸೋರಿಕೆಯಾಗುವ ಅಪಾಯವಿರುತ್ತದೆ. ಅಷ್ಟೇ ಅಲ್ಲದೇ ಅಡುಗೆ ಮಾಡಿದ ಪಾತ್ರೆಗಳ ತಳವೂ ಸಹ ಕಪ್ಪಾಗುತ್ತದೆ. ಆಗ ಪಾತ್ರೆ ತೊಳೆಯಲೂ ಸಹ ಹೆಚ್ಚಿನ ಸಮಯ ಬೇಕಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಗ್ಯಾಸ್‌ ಬರ್ನರ್‌ ಅನ್ನು ಸ್ಚಚ್ಛಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ನಿಮ್ಮ ಸಮಯವೂ ಅದೇ ರೀತಿ ವ್ಯರ್ಥವಾಗುತ್ತಿದ್ದರೆ, ನಿಮಗಾಗಿ ಇಲ್ಲಿ ಸರಳ ಟ್ರಿಕ್‌ಗಳಿವೆ. ಅವುಗಳನ್ನು ಉಪಯೋಗಿಸಿಕೊಂಡು ನೀವು ಸುಲಭವಾಗಿ ಗ್ಯಾಸ್‌ ಬರ್ನರ್‌ ಸ್ವಚ್ಛಗೊಳಿಸಬಹುದು.

ಗ್ಯಾಸ್‌ ಸ್ಟವ್‌ ಬರ್ನರ್‌ ಸುಲಭವಾಗಿ ಸ್ವಚ್ಛಗೊಳಿಸಲು ಈ ಟ್ರಿಕ್‌ಗಳನ್ನು ಬಳಸಿ

ವಿನೆಗರ್‌: ಗ್ಯಾಸ್‌ ಸ್ಟವ್‌ ಬರ್ನರ್‌ ಅನ್ನು ಸ್ವಚ್ಛಗೊಳಿಸಲು ನೀವು ವಿನೆಗರ್‌ ಅನ್ನು ಬಳಸಬಹುದು. ಒಂದು ಬೌಲ್‌ಗೆ ವಿನೆಗರ್‌ ಮತ್ತು ಉಪ್ಪು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಆ ಮಿಶ್ರಣವನ್ನು ಬಿಸಿ ಮಾಡಿ. ಅದರಲ್ಲಿ ಸ್ಟೌವ್‌ನ ಬರ್ನರ್‌ ಹಾಕಿ. ಸ್ವಲ್ಪ ಸಮಯ ಹಾಗೆಯೇ ಬಿಡಿ. ನಂತರ ಬ್ರಷ್‌ನಿಂದ ಸ್ವಲ್ಪ ಉಜ್ಜಿ. ನೀರಿನಿಂದ ತೊಳೆಯಿರಿ. ಈಗ ಬರ್ನರ್‌ ಹೊಸದರಂತೆ ಹೊಳೆಯುತ್ತದೆ.

ಈನೋ: ಗ್ಯಾಸ್‌ ಬರ್ನರ್‌ ಸ್ವಚ್ಛಗೊಳಿಸಲು ಈನೋ ಕೂಡಾ ತುಂಬಾ ಪರಿಣಾಮಕಾರಿಯಾಗಿದೆ. ಈನೋದಿಂದ ಬರ್ನರ್‌ ಸ್ವಚ್ಛಗೊಳಿಸಲು ಒಂದು ಬೌಲ್‌ ಬಿಸಿನೀರು ತೆಗೆದುಕೊಳ್ಳಿ. ಅದಕ್ಕೆ ನಿಂಬೆ ರಸ ಮತ್ತು ಈನೋ ಸೇರಿಸಿ. ಈ ಮಿಶ್ರಣದಲ್ಲಿ ಗ್ಯಾಸ್‌ ಬರ್ನರ್‌ ಹಾಕಿ. ಸ್ವಲ್ಪ ಸಮಯ ಬಿಡಿ. ನಂತರ ಬ್ರಷ್‌ನ ಸಹಾಯದಿಂದ ಬ್ರಷ್‌ ಅನ್ನು ಉಜ್ಜಿ. ಆಮೇಲೆ ಶುದ್ಧ ನೀರಿನಿಂದ ತೊಳೆಯಿರಿ. ಒಣ ಬಟ್ಟೆಯಿಂದ ಒರೆಸಿ ನಂತರ ಉಪಯೋಗಿಸಿ.

ನಿಂಬೆ ರಸ: ನಿಂಬೆ ರಸ ಕೂಡಾ ಗ್ಯಾಸ್‌ ಬರ್ನರ್‌ ಸ್ವಚ್ಛಗೊಳಿಸಲು ಉತ್ತಮವಾಗಿದೆ. ಒಂದು ಬೌಲ್‌ ಬಿಸಿ ನೀರು ತೆಗೆದುಕೊಳ್ಳಿ. ರಾತ್ರಿಯಿಡೀ ಬರ್ನರ್‌ ಅನ್ನು ಅದರಲ್ಲಿ ಮುಳುಗಿಸಿ. ಮರುದಿನ ಬೆಳಿಗ್ಗೆ ಅರ್ಧ ನಿಂಬೆ ಕಾಯಿಗೆ ಮೇಲಿನಿಂದ ಸ್ವಲ್ಪ ಉಪ್ಪು ಹಾಕಿ ಬರ್ನರ್‌ ಅನ್ನು ಉಜ್ಜಿ. ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ.

ಈ ಸಿಂಪಲ್‌ ಟ್ರಿಕ್ಸ್‌ ಬಳಸಿಕೊಂಡು ನಿಮ್ಮ ಅಡುಗೆಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದು ನಿಮ್ಮ ಅಡುಗೆಮನೆ ಸುಂದರವಾಗಿ ಕಾಣುವುದರ ಜೊತೆಗೆ ಸುರಕ್ಷತೆಯನ್ನು ನೀಡುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries