ತಿರುವನಂತಪುರಂ: ಕೇರಳ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ನಿತಿನ್ ಮಧುಕರ್ ಜಾಮ್ದಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಪ್ರಮಾಣ ವಚನ ಬೋಧಿಸಿದರು.
ಮಹಾರಾಷ್ಟ್ರ ಮೂಲದ ಅವರು 23 ಜನವರಿ 2012 ರಂದು ಬಾಂಬೆ ಹೈಕೋರ್ಟ್‍ಗೆ ನೇಮಕಗೊಂಡರು. ಮೇ 2023 ರಿಂದ ಬಾಂಬೆ ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಕೀಲರ ಕುಟುಂಬದಲ್ಲಿ ಜನಿಸಿದವರು ಮಧುಕರ್ ಅವರು.
ಕೇರಳ ಮತ್ತು ಮದ್ರಾಸ್ ಹೈಕೋರ್ಟ್‍ಗಳ ಹೊರತಾಗಿ ಇನ್ನೂ ಆರು ಹೈಕೋರ್ಟ್‍ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ.