ರಿಯಾದ್: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆ ಲ್ಯಾವ್ರೊಫ್ ಅವರನ್ನು ಸೋಮವಾರ ಸೌದಿ ರಾಜಧಾನಿ ರಿಯಾದ್‌ನಲ್ಲಿ ಭೇಟಿಯಾದರು.
ರಿಯಾದ್: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆ ಲ್ಯಾವ್ರೊಫ್ ಅವರನ್ನು ಸೋಮವಾರ ಸೌದಿ ರಾಜಧಾನಿ ರಿಯಾದ್‌ನಲ್ಲಿ ಭೇಟಿಯಾದರು.
ಉಕ್ರೇನ್ ಸಂಘರ್ಷದ ವಿಚಾರವಾಗಿ ಭಾರತ ಸೇರಿ ಮೂರು ದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಿಳಿಸಿದ ಬೆನ್ನಲ್ಲೇ ಉಭಯ ದೇಶಗಳ ನಾಯಕರು ಭೇಟಿಯಾಗಿದ್ದಾರೆ.
ಭಾರತ-ಗಲ್ಫ್ ಸಹಕಾರ ಮಂಡಳಿಯ ವಿದೇಶಾಂಗ ಸಚಿವರ ಸಭೆಯ ಮಧ್ಯೆಯೇ ಜೈಶಂಕರ್ ಮತ್ತು ಲ್ಯಾವ್ರೊಫ್ ಅವರು ಸಂವಾದ ನಡೆಸಿದರು.
ಗಲ್ಫ್ ಸಹಕಾರ ಮಂಡಳಿಯು ಯುಎಇ, ಬಹರೈನ್, ಸೌದಿ ಅರೇಬಿಯಾ, ಒಮಾನ್, ಕತಾರ್ ಮತ್ತು ಕುವೈತ್ ದೇಶಗಳನ್ನು ಒಳಗೊಂಡಿದೆ.
ಜೈಶಂಕರ್ ಅವರು ಮೂರು ದೇಶಗಳ ಪ್ರವಾಸದ ಭಾಗವಾಗಿ ಭಾನುವಾರ ಸೌದಿ ರಾಜಧಾನಿಗೆ ಭೇಟಿ ನೀಡಿದ್ದಾರೆ. ನಂತರ ಜರ್ಮನಿಗೆ ಪ್ರಯಾಣ ಬೆಳೆಸಿ, ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ಮತ್ತು ಇತರ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪ್ರವಾಸದ ಕೊನೆಯ ದಿನ ಜಿನೆವಾಗೆ ಭೇಟಿ ನೀಡಲಿದ್ದಾರೆ.