ತಿರುವನಂತಪುರಂ: ನಿರ್ದೇಶಕ ಹಾಗೂ ನಟ ಬಾಲಚಂದ್ರ ಮೆನನ್ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. 'ಡಿ ಇಂಗೋಟ್ ನೋಕ್ಕಿ' ಚಿತ್ರದ ಸೆಟ್‍ನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಆರೋಪ ಮಾಡಲಾಗಿದೆ.
ಮುಖೇಶ್ ಸೇರಿದಂತೆ ನಟರ ವಿರುದ್ಧ ದೂರು ದಾಖಲಿಸಿದ್ದ ಆಲುವಾ ಮೂಲದ ನಟಿ ಬಾಲಚಂದ್ರ ಮೆನನ್ ವಿರುದ್ಧವೂ ವಿಶೇಷ ತನಿಖಾ ತಂಡದ ಮುಂದೆ ದೂರು ದಾಖಲಿಸಿದ್ದಾರೆ.
2007ರ ಜನವರಿಯಲ್ಲಿ ಈ ಘಟನೆ ನಡೆದಿತ್ತು. ತಿರುವನಂತಪುರಂನಲ್ಲಿರುವ ಹೋಟೆಲ್ ಕೋಣೆಗೆ ಕರೆಸಿ ಗ್ರೂಪ್ ಸೆಕ್ಸ್ ಮಾಡುವಂತೆ ಒತ್ತಾಯಿಸಲಾಯಿತು. ದೂರಿನ ಪ್ರಕಾರ, ಇಲ್ಲಿಗೆ ತಲುಪಿದಾಗ ಬಾಲಚಂದ್ರ ಮೆನನ್ 18 ವರ್ಷದ ಯುವತಿಯನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿರುವುದಾಗಿ, ಅಲ್ಲಿಂದ ವಾಪಸಾದ ಬಳಿಕ ಕೊಠಡಿಗೆ ಬಂದ ಬಾಲಚಂದ್ರ ಮೆನನ್ ಏಕಾಏಕಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾನೆ ಎಂಬುದು ದೂರಲಾಗಿದೆ.
ಹೊರಗೆ ಹೇಳಿದರೆ ಸಿನಿಮಾದ ದೃಶ್ಯಗಳನ್ನು ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಬಾಲಚಂದ್ರ ಮೆನನ್ ವಿರುದ್ಧ ಭಯದ ಕಾರಣ ದೂರು ನೀಡಿರಲಿಲ್ಲ ಎಂದು ನಟಿ ಹೇಳಿದ್ದಾರೆ. ಈ ಹಿಂದೆ ಬಾಲಚಂದ್ರ ಮೆನನ್ ಅವರು ಆಲುವಾ ಮೂಲದ ನಟಿ ಮತ್ತು ವಕೀಲರು ತನ್ನನ್ನು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಪೆÇಲೀಸ್ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು. ವಕೀಲರು ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬುದು ದೂರು. ಮೂರು ಲೈಂಗಿಕ ಆರೋಪಗಳು ಶೀಘ್ರದಲ್ಲೇ ಬರಲಿವೆ ಎಂದು ಪೋನ್ ಮೂಲಕ ಬೆದರಿಕೆ ಹಾಕಲಾಗಿದೆ. ಮರುದಿನ ನಟಿ ಈ ಬಗ್ಗೆ ಪ್ರಸ್ತಾಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.