ಒಬ್ಬ ವ್ಯಕ್ತಿಯೂ ತೃಪ್ತಿಯನ್ನು ಕಾಣುವುದು ಆಹಾರದಿಂದ ಮಾತ್ರ. ಈ ಕಾರಣದಿಂದಲೇ ಅಡುಗೆ ಮನೆಯೂ ಬಹಳ ಪ್ರಮುಖವಾದ ಸ್ಥಳಗಳಲ್ಲಿ ಒಂದಾಗಿದೆ. ಹೀಗಾಗಿ ಅಡುಗೆ ಮನೆಯನ್ನು ದಿನವೂ ಸ್ವಚ್ಛವಾಗಿಸಿಟ್ಟುಕೊಳ್ಳುವುದು ಮುಖ್ಯ. ಸಾಮಾನುಗಳನ್ನು ನೀಟಾಗಿ ಹೊಂದಿಸಿಟ್ಟರೆ ಆರೋಗ್ಯವು ಉತ್ತಮವಾಗಿರುತ್ತದೆ.
ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ಹೋದಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತದೆ. ಅದಲ್ಲದೇ ಅಡುಗೆ ಮನೆಯಲ್ಲಿ ಕೆಲವು ವಸ್ತುಗಳನ್ನು ಈ ತಪ್ಪುಗಳನ್ನು ಮಾಡಲೇಬಾರದು.
ಮಹಿಳೆಯರಿಗೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ತಲೆನೋವಿನ ಕೆಲಸ. ಎಷ್ಟೇ ಸ್ವಚ್ಛತೆಯನ್ನು ಕಾಪಾಡಿಕೊಂಡರೂ ಮತ್ತೆ ಮೊದಲಿನಂತೆ ಆಗುತ್ತದೆ. ಅಡುಗೆ ಮನೆಯು ಸ್ವಚ್ಛವಾಗಿದ್ದರೆ ಮಾತ್ರ ಆಹಾರ ಸೇವಿಸಲು ಮನಸ್ಸಾಗುತ್ತದೆ. ಆದರೆ ಹೆಚ್ಚಿನ ಸಲ ಈ ಆಹಾರ ಪದಾರ್ಥಗಳಲ್ಲಿ ಬಳಸಿದ ಎಣ್ಣೆಯ ಜಿಡ್ದು ಗೋಡೆಯ ಮೇಲೆ ಇರುತ್ತದೆ. ಟೈಮ್ ಯಿಲ್ಲದೇ ಕೆಲವೊಮ್ಮೆ ಎಲ್ಲಾ ವಸ್ತುಗಳನ್ನು ಕಿಚನ್ ಕೌಂಟರ್ ಟಾಪ್ ನಲ್ಲಿಟ್ಟು ಬಿಡುತ್ತೇವೆ. ಇದು ಕೌಂಟರ್ ಟಾಪ್ ಸೂಕ್ತ ಸ್ಥಳವೆನಿಸಿದರೂ ಕೂಡ ಇದರಿಂದ ವಸ್ತುಗಳು ಹಾಳಾಗುತ್ತದೆ.
- ಮೊಟ್ಟೆಗಳು : ಅಂಗಡಿಯಿಂದ ಖರೀದಿಸಿದ ತಂದ ಮೊಟ್ಟೆಗಳನ್ನು ಗ್ಯಾಸ್ ಸ್ಟವ್ ಪಕ್ಕ ಜೋಡಿಸಿ ಇಡುವ ಅಭ್ಯಾಸವು ಕೆಲವರಿಗೆ ಇರುತ್ತದೆ. ಅಡುಗೆ ಮನೆಯ ಕೌಂಟರ್ ಟಾಪ್ ನಲ್ಲಿ ಗ್ಯಾಸ್ ಸ್ಟೌವ್ ಸೇರಿದಂತೆ ಎಲ್ಲಾ ರೀತಿಯ ಉಪಕರಣಗಳಿರುತ್ತವೆ. ಬ್ಯಾಕ್ಟೀರಿಯಾಗಳು ಈ ಬೆಚ್ಚಗಿನ ವಾತಾವರಣದಲ್ಲಿ ಹೆಚ್ಚು ಇರುವ ಕಾರಣ ಮೊಟ್ಟೆಯೂ ಹಾಳಾಗಬಹುದು. ಹೀಗಾಗಿ ಮೊಟ್ಟೆಗಳನ್ನು ತಂಪಾದ ವಾತಾವರಣದಲ್ಲಿ ಅಂದರೆ ಫ್ರಿಡ್ಜ್ ನಲ್ಲಿ ಇರಿಸುವುದು ಸೂಕ್ತ.
- ಬ್ರೆಡ್ : ಕಾಫಿ ಟೀಯೊಂದಿಗೆ ಎಲ್ಲರೂ ಇಷ್ಟ ಪಡುವ ಬ್ರೆಡನ್ನು ಕೆಲವರು ಅಡುಗೆ ಮನೆಯ ಕೌಂಟರ್ ಟಾಪ್ ನಲ್ಲಿರಿಸುತ್ತಾರೆ..ಆದರೆ ಈ ಬ್ರೆಡ್ ಇಡುವುದರಿಂದ ತೇವಾಂಶಕ್ಕೆ ಒಡ್ಡಿಕೊಳ್ಳುವುದರಿಂದ ತಾಜಾತನವನ್ನು ಕಳೆದುಕೊಳ್ಳುತ್ತದೆ. ಬ್ರೆಡನ್ನು ಸಂಗ್ರಹಿಸಲು ಉತ್ತಮ ಸ್ಥಳವೆಂದರೆ ಬ್ರೆಡ್ ಬಾಕ್ಸ್ ಅಥವಾ ಫ್ರಿಡ್ಜ್ ಎನ್ನಬಹುದು.
- ಈರುಳ್ಳಿ : ಹೆಚ್ಚಿನವರು ಮಾರುಕಟ್ಟೆಯಿಂದ ತಂದ ಈರುಳ್ಳಿಯನ್ನು ಬುಟ್ಟಿಗೆ ಹಾಕಿ ಕಿಚನ್ ಕೌಂಟರ್ ಟಾಪ್ ನಲ್ಲಿ ಅಥವಾ ಗ್ಯಾಸ್ ಸ್ಟವ್ ಪಕ್ಕದಲ್ಲಿ ಖಾಲಿಯಿರುವ ಸ್ಥಳದಲ್ಲಿ ಇಡುತ್ತಾರೆ. ಆದರೆ ಹೆಚ್ಚು ಸಮಯ ಬಿಟ್ಟರೆ ಅವು ಮೊಳಕೆಯೊಡೆಯಬಹುದು ಇಲ್ಲದಿದ್ದರೆ ಕೊಳೆತು ಹೋಗುವ ಸಾಧ್ಯ ತೆಯೇ ಹೆಚ್ಚು. ಹೀಗಾಗಿ ಈರುಳ್ಳಿಯನ್ನು ಸಂಗ್ರಹಿಸಲು ಶುಷ್ಕ ಸ್ಥಳವನ್ನು ಆಯ್ದುಕೊಳ್ಳಬೇಕು. ಅದಲ್ಲದೇ ಇದನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಇಡುವುದನ್ನು ತಪ್ಪಿಸುವುದು ಒಳ್ಳೆಯದು.
- ಟೊಮ್ಯಾಟೊ : ಟೊಮೊಟೊಗಳನ್ನು ಸಂಗ್ರಹಿಸಿಡಲು ಕೌಂಟರ್ ಟಾಪ್ ಅತ್ಯುತ್ತಮ ಆಯ್ಕೆಯಾಗಿಲ್ಲ. ತೆರೆದ ಸ್ಥಳದಲ್ಲಿ ಇಡುವುದರಿಂದ ಬೇಗನೇ ಹಣ್ಣಾಗುತ್ತದೆ. ಬೆಳಕು ಬೀಳದ ಜಾಗದಲ್ಲಿ ಇಡುವುದು ಸೂಕ್ತ. ಟೊಮೊಟೊ ಹಾಳಾಗಬಾರದೆನ್ನುವುದಾದರೆ ಫ್ರಿಡ್ಜ್ ನಲ್ಲಿ ಇಡುವುದು ಉತ್ತಮ.
- ಆಲೂಗಡ್ಡೆ : ಅಡುಗೆ ಮನೆಯಲ್ಲಿರುವ ಗ್ಯಾಸ್ ಸ್ಟವ್ ಪಕ್ಕದಲ್ಲಿ ಜಾಗವಿದೆಯೆಂದು ಅಲ್ಲೇ ಆಲೂಗಡ್ಡೆಯನ್ನು ಸಂಗ್ರಹಿಸುತ್ತಾರೆ. ಆದರೆ ಈ ಕಿಚನ್ ಕೌಂಟರ್ ಟಾಪ್ ನಲ್ಲಿ ಈ ತರಕಾರಿಯನ್ನು ಶೇಖರಿಸಿಡುವುದರಿಂದ ನಿರಂತರ ಬೆಳಕಿಗೆ ಒಡ್ಡಿಕೊಂಡು ಮೊಳಕೆಯೊಡೆಯುತ್ತದೆ. ಹೀಗಾಗಿ ಗಾಳಿಯಾಡುವ ಸೆಣಬಿನ ಚೀಲದಲ್ಲಿ ಸಂಗ್ರಹಿಸುವ ಮೂಲಕ ಹಾಳಾಗುವುದನ್ನು ತಪ್ಪಿಸಬಹುದು.