ಕಾಸರಗೋಡು: ಉದುಮದಲ್ಲಿ ಹೊಸದಗಿ ನಿರ್ಮಿಸಲಾಗಿರುವ ಉಪನೋಂದಾವಣಾ ಕಚೇರಿಯನ್ನು ಇಂದು ಸೆ. 23ರಂದು ಬೆಳಗ್ಗೆ 10ಕ್ಕೆ ನೋಂದಣಿ, ಪ್ರಾಚ್ಯವಸ್ತು ಮತ್ತು ದಾಖಲಾತಿ ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಉದ್ಘಾಟಿಸುವರು.
ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಪಾಲ್ಗೊಳ್ಳುವರು. ಉದುಮ ಉಪನೋಂದಾವಣಾ ಕಚೇರಿ ಉದ್ಘಾಟನೆಯೊಂದಿಗೆ ಕಾಸರಗೋಡು ಜಿಲ್ಲೆಯ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳು ಸ್ವಂತ ಕಟ್ಟಡ ಹೊಂದಿದ ಕೇರಳದ ಪ್ರಥಮ ಜಿಲ್ಲೆಯಾಗಿ ಕಾಸರಗೋಡು ಜಿಲ್ಲೆ ಗುರುತಿಸಲ್ಪಡಲಿದೆ.
ಸಚಿವ ರಾಮಚಂದ್ರನ್ ಕಾಡನಪಲ್ಲಿ ಎಲ್ಲಾ ಸಬ್ ರಿಜಿಸ್ಟರ್ ಕಛೇರಿಗಳು ಸ್ವಂತ ಕಟ್ಟಡ ಹೊಂದಿರುವ ಜಿಲ್ಲೆಯಾಗಿ ಕಾಸರಗೋಡನ್ನು ಘೋಷಿಸಲಿದ್ದಾರೆ. ಬದಿಯಡ್ಕ, ಬಳಾಲ್, ಹೊಸದುರ್ಗ, ಕಾಸರಗೋಡು, ಮಂಜೇಶ್ವರ, ನೀಲೇಶ್ವರ, ರಾಜಪುರಂ, ತ್ರಿಕರಿಪುರ, ಉದುಮದಲ್ಲಿ ಉಪ ನೋಂದಾವಣಾ ಕಚೇರಿಗಳು ಕಾರ್ಯಾಚರಿಸುತ್ತಿದ್ದು, ಜಿಲ್ಲಾ ನೋಂದಣಾಧಿಕಾರಿ ಕಚೇರಿಯು ವಿದ್ಯಾನಗರ ಸಿವಿಲ್ ಸ್ಟೇಶನ್‍ನಲ್ಲಿ ಕಾರ್ಯನಿರ್ವಹಿಸುತ್ತಿದೆ.