ಕಣ್ಣೂರು: ಸಿಪಿಎಂ ಕಾರ್ಯಕರ್ತ ಪುಷ್ಪನ್ ಅವರ ಗೌರವಾರ್ಥವಾಗಿ ಇಂದು(ಭಾನುವಾರ) ಕೂತುಪರಂಬ್ ಮತ್ತು ತಲಶ್ಶೇರಿ ಕ್ಷೇತ್ರಗಳಲ್ಲಿ ಹರತಾಳ ಆಚರಿಸಲು ಸಿಪಿಎಂ ಕರೆ ನೀಡಿದೆ.
ಪುಷ್ಪನ್ ಶನಿವಾರ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೂತುಪರಂಬ್ ಪೋಲೀಸ್ ಫೈರಿಂಗ್‍ನಿಂದ ದೇಹ ದುರ್ಬಲಗೊಂಡು 29 ವರ್ಷಗಳಿಗೂ ಹೆಚ್ಚು ಕಾಲ ಪುಷ್ಪನ್ ಹಾಸಿಗೆ ಹಿಡಿದಿದ್ದರು.
ಹರತಾಳದಿಂದ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಮೃತ ದೇಹವನ್ನು ಭಾನುವಾರ ಬೆಳಗ್ಗೆ 8 ಗಂಟೆಗೆ ತಲಶ್ಶೇರಿಗೆ ತರಲಾಗುವುದು. 10 ಗಂಟೆಯಿಂದ ತಲಶ್ಶೇರಿ ಟೌನ್ ಹಾಲ್ ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗುವುದು.
ನಂತರ ಚೋಕ್ಲಿಯಲ್ಲಿಯೂ ಸಾರ್ವಜನಿಕ ದರ್ಶನ ನಡೆಯಲಿದೆ. ಸಂಜೆ 5 ಗಂಟೆಗೆ ಮನೆಯ ಆವರಣದಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.