HEALTH TIPS

ಮಠದ ಬೆಳವಣಿಗೆ ಮೂಲಕ ಸನಾತನ ಸಂಸ್ಕøತಿ ರಕ್ಷಣೆಗೆ ಮುಂದಾಗೋಣ-ಕೊಂಡೆವೂರು ಶ್ರೀಗಳು

                ಉಪ್ಪಳ:  ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 21 ನೇ ಚಾತುರ್ಮಾಸ್ಯ ಮಂಗಲೋತ್ಸವ ಅಂಗವಾಗಿ ಹಮ್ಮಿಕೊಂಡ 48 ಗಂಟೆಗಳ ಅಖಂಡ  ಭಜನೋತ್ಸವದ ಮಂಗಲೋತ್ಸವ ಮಂಗಳವಾರ  ಸೂರ್ಯಾಸ್ತ ನಡೆಯಿತು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪೂಜ್ಯಶ್ರೀಗಳು ಆಶೀರ್ವಚನ ನೀಡಿ, ಭಗವಂತನ ಸ್ಮರಣೆ ವ್ರತನಿಯಮಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ. ಎಲ್ಲರ ಸತ್‍ಚಿಂತನೆಯಿಂದ ಸಾನ್ನಿಧ್ಯ ವೃದ್ಧಿಯಾದ ಕೊಂಡೆವೂರು ಮಠದ ಬೆಳವಣಿಗೆ ಮೂಲಕ ಸನಾತನ ಸಂಸ್ಕøತಿ ರಕ್ಷಣೆಗೆ ಕೈ ಜೋಡಿಸೋಣ ಎಂದು ಕರೆನೀಡಿದರು.

              ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭದ್ರಾವತಿ ಬನಶಂಕರಿ ದೇವಸ್ಥಾನದ ಅಧ್ಯಕ್ಷ  ಎಮ್. ಪ್ರಭಾಕರ, ಮುಳಿಂಜ ಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಹರಿನಾಥ ಭಂಡಾರಿ, ಧಾರ್ಮಿಕ ಮುಂದಾಳುಗಳಾದ  ಪಿ ಆರ್ ಶೆಟ್ಟಿ ಪೆÇಯ್ಯೆಲು, ಶ್ರೀಧರ ಶೆಟ್ಟಿ ಮುಟ್ಟಂ, ಶಶಿಧರ ಶೆಟ್ಟಿ ಗ್ರಾಮಚಾವಡಿ ಶುಭಾಶಂಸನೆಗೈದರು. 

                  ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಧಾನ ಪರಿಷತ್ತು ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಸಂಸ್ಕಾರ ಸಂಸ್ಕøತಿಗಾಗಿ ಜಗತ್ತೇ ನೋಡುತ್ತಿರುವ ಪವಿತ್ರ ಭರತಭೂಮಿಯ ಸನಾತನ ಧರ್ಮವನ್ನು ಉಳಿಸಿ ಬೆಳೆಸಲು ಭೇದಗಳಿಲ್ಲದೆ ಒಗ್ಗಟ್ಟಾಗೋಣ. ಯುವ ಸಮೂಹಕ್ಕೆ ಆಧ್ಯಾತ್ಮಿಕ, ಧಾರ್ಮಿಕ ಮೌಲ್ಯಗಳನ್ನು ದಾಟಿಸುವ ಯತ್ನ ಸಮರೋಪಾದಿಯಲ್ಲಿ ಆಗಬೇಕು ಎಂದು ತಿಳಿಸಿದರು.  ಕು. ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆಗೈದ ಸಮಾರಂಭದಲ್ಲಿ ಗಂಗಾಧರ ಕೊಂಡೆವೂರು ಸ್ವಾಗತಿಸಿ, ಸರ್ವೇಶ್ ಕೊಂಡೆವೂರು ವಂದಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು.

            ಸೆ. 18 ಬುಧವಾರ ಪ್ರಾತಃ ಪೂಜೆಯ ನಂತರ ನಕ್ಷತ್ರವನದ ಆನಂದತೀರ್ಥ ಪುಷ್ಕರಿಣಿಯಲ್ಲಿ ಶ್ರೀಗಳವರಿಂದ ಮೃತ್ತಿಕಾ ವಿಸರ್ಜನೆ ನಡೆದು ಭಕ್ತಾದಿಗಳು ಪವಿತ್ರ ತೀರ್ಥ ಸ್ನಾನ ಮಾಡಿ ಪೂಜ್ಯರಿಂದ ಮಂಗಲಮಂತ್ರಾಕ್ಷತೆ ಸ್ವೀಕರಿಸಿ ಪುನೀತರಾದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries