ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚತುರ್ಥ ಚಾತುರ್ಮಾಸ್ಯದ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸೆ. 14ರಂದು ಸಂಜೆ 5.30ಕ್ಕೆ ಕಲಾರತ್ನ ಶಂನಾಡಿಗ ಕುಂಬಳೆ ಮತ್ತು ಬಳಗದವರಿಂದ ಹರಿಕಥಾ ಸತ್ಸಂಗ ನಡೆಯುವುದು. ಸಂಜೆ 7.30ಕ್ಕೆ ನಡೆಯುವ ಆಸ್ತ್ರೀಯ ಸಂಗೀತ ವೈಭವದಲ್ಲಿ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅವರಿಂದ ಹಾಡುಗರಿಕೆ ನಡೆಯುವುದು. ವಯಲಿನ್‍ನಲ್ಲಿ ವಿದ್ವಾನ್ ಕಲ್ಮಾಡಿ ಎಸ್. ಪೂರ್ಣಪ್ರಜ್ಞ, ಮ್ರದಂಗದಲ್ಲಿ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಹಾಗೂ ಘಟಂನಲ್ಲಿ ವಿದ್ವಾನ್ ಆಶ್ಲೇಷ ಸಹಕರಿಸುವರು.
15ರಂದು ಸಂಜೆ 5ರಿಂದ ಕಾಸರಗೋಡು ಶ್ರೀ ಪಾಂಡುರಂಗ ಭಜನಾ ಮಂಡಳಿ ವತಿಯಿಂದ ಭಜನ್ ಸಂಧ್ಯಾ, 6.30ಕ್ಕೆ ಶ್ರೀ ಮಠದ ಅಭಿಮಾನಿ ಶಿಷ್ಯ ಯಕ್ಷಗಾನ ಕಲಾವಿದರಿಂದಭಕ್ತ ಸುಧಾಮ-ಗಿರಿಜಾ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯುವುದು.
16ರಂದು ಸಂಜೆ 5.30ಕ್ಕೆ ದಾಸವಾಣಿ, 17ರಂದು ಸಂಜೆ 5.30ಕ್ಕೆ ಭಕ್ತಿ ಸಂಗೀತ, 7.30ಕ್ಕೆ ಪದಯಾಣ ತಂಡದವರಿಂದ ಭರತನಾಟ್ಯ ಪ್ರಸ್ತುತಿ, 18ರಂದು ಸಂಜೆ 4ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7ರಿಂದ ಶಬರಿಮಲೆ ಹರಿವರಾಸನಂ ಪ್ರಶಸ್ತಿ ಪುರಸ್ಕøತ ಕಲೈಮಾಮಣಿ ವೀರಮಣಿ ರಾಜು ಮತ್ತು ಭಕ್ತಿ ಗಾನ ಗಂಧರ್ವ ಅಭಿಷೇಕ್ ರಾಜು ಚೆನ್ನೈ ಮತ್ತು ಬಳಗದವರಿಂದ ಭಕ್ತಿಗಾನ ಸಂಧ್ಯಾ ಕಾರ್ಯಕ್ರಮ ಜರುಗಲಿರುವುದು.