ಕಾಸರಗೋಡು: ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದ ಒಟ್ಟು ಆರು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಅವರ ನಿರ್ದೇಶ ಪ್ರಕಾರ ಜಿಲ್ಲಾದ್ಯಂತ ಭಾನುವಾರ ನಡೆಸಲಾದ 'ಆಪರೇಶನ್ ಪಿ-ಹಂಟ್'ಕಾರ್ಯಾಚರಣೆಯನ್ವಯ ಇವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕುಂಬಳೆ, ವಿದ್ಯಾನಗರ, ಬದಿಯಡ್ಕ, ರಾಜಾಪುರಂ ಠಾಣೆಗಳಲ್ಲಿ ತಲಾ ಒಂದು ಹಾಗೂ ಕಾಞಂಗಾಡು ಪೊಲೀಸ್ ಠಾಣೆ ವ್ಯಾಪ್ತಿಯಿಂದ ಬ್ಲ್ಯೂಫಿಲ್ಮ್ ವೀಕ್ಷಿಸುತ್ತಿದ್ದ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಅಶ್ಲೀಲ ವಿಡಿಯೋ ವೀಕ್ಷಿಸಲು ಬಳಸಿದ್ದ ಆರು ಮೊಬೈಲ್ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇವುಗಳನ್ನು ತಪಾಸಣೆಗಾಗಿ ಲ್ಯಾಬ್‍ಗೆ ಕಳುಹಿಸಿಕೊಡಲಗಿದೆ. ಮಕ್ಕಳ ಹಕ್ಕು ಸಂರಕ್ಷಣೆಗಾಗಿ ಕೇಂದ್ರ ಗೃಹಸಚಿವಾಲಯದ ನಿರ್ದೇಶ ಪ್ರಕಾರ ' ಆಪರೇಶನ್ ಪಿ-ಹಂಟ್'ಕಾರ್ಯಾಚರಣೆ ನಡೆಸಲಾಗಿದೆ.