HEALTH TIPS

ಒಲಿಂಪಿಕ್ಸ್‌ಗಿಂತ ಎತ್ತರಕ್ಕೆ ಹೈಜಂಪ್ ಜಿಗಿದ ಗ್ರಾಮೀಣ ಯುವಕ: ವಿಡಿಯೋ ವೈರಲ್

 ವೈರಲ್ ವಿಡಿಯೋ ಸುದ್ದಿ: ನಮ್ಮ ದೇಶದಲ್ಲಿ 130 ಕೋಟಿಗಿಂತ ಹೆಚ್ಚು ಜನರಿದ್ದರೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಂದು ಬಂಗಾರದ ಪದಕವನ್ನೂ ಗೆಲ್ಲಲಾಗಲಿಲ್ಲ. ಆದರೆ, ಯಾವುದೇ ಕ್ರೀಡಾ ಸೌಲಭ್ಯಗಳಿಲ್ಲದ ಗ್ರಾಮೀಣ ಯುವಕನೊಬ್ಬ ಹೈಜಂಪ್ ಮಾಡಿದ್ ವೈರಲ್ ವಿಡಿಯೋ ನೋಡಿದರೆ ಈತ, ಒಲಿಂಪಿಕ್ಸ್‌ಗಿಂತಲೂ ಹೆಚ್ಚು ಹೈಜಂಪ್‌ಗಿಂತಲೂ ಎತ್ತರದಲ್ಲಿ ಜಿಗಿದಿದ್ದಾನೆ ಎಂದು ನೆಟ್ಟಿಗರು ಉಲ್ಲೇಖ ಮಾಡಿದ್ದಾರೆ.

ಜೊತೆಗೆ, ಈತ ಭಾರತದ ನಿಜವಾದ ಒಲಿಂಪಿಕ್ ಸ್ಪರ್ಧೆಯ ಪ್ರತಿಭೆ ಎಂದು ಹಾಡಿ ಹೊಗಳಿದ್ದಾರೆ.

ಭಾರತದ ಗ್ರಾಮ-ಗ್ರಾಮಗಳಲ್ಲಿ ಪ್ರತಿಭೆ ತುಂಬಿದೆ. ಜನರ ಬಳಿ ಸಂಪನ್ಮೂಲಗಳಿಲ್ಲ, ಆದರೂ ಅವರು ತಮ್ಮ ಹವ್ಯಾಸವನ್ನು ಪೂರೈಸಲು ಹರಸಾಹಸ ಪಡುತ್ತಾರೆ. ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ, ಅಂತಹ ಪ್ರತಿಭೆಗಳು ಈಗ ಜನರನ್ನು ತಲುಪುತ್ತಿವೆ. ಇತ್ತೀಚೆಗೆ, ಒಂದು ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಒಬ್ಬ ಯುವಕ ಹೈಜಂಪ್ ಮಾಡುತ್ತಿರುವುದನ್ನು ಕಾಣಬಹುದು. ಈ ರೀತಿಯ ಸ್ಪರ್ಧೆಗಳಲ್ಲಿ ಬಳಸಲಾಗುವ ಯಾವುದೇ ಪರಿಕರಗಳು ಅವನ ಬಳಿ ಇಲ್ಲ. ಆದರೂ ತುಂಬಾ ಎತ್ತರವಾಗಿರುವ ಕಡ್ಡಿಯ ಮೇಲೆ ಆತ ಜಿಗಿದಿದ್ದಾನೆ.


ಹೈಜಂಪ್‌ನಲ್ಲಿ ಸಾಮರ್ಥ್ಯ ತೋರಿಸಿದ ಗ್ರಾಮೀಣ ಹುಡುಗ: ಸಾಮಾಜಿಕ ಜಾಲತಾಣ @Gulzar_sahab ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಒಬ್ಬ ಯುವಕ ಎತ್ತರ ಜಿಗಿತದ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಇಲ್ಲಿ ಕೆಲವು ಜನರು ಈ ಎತ್ತರ ಜಿಗಿತದ ಆಟಕ್ಕೆ ಸಣ್ಣಪುಟ್ಟ ವ್ಯವಸ್ಥೆ ಮಾಡಿದ್ದಾರೆ. ಯುವಕ ಎತ್ತರದಿಂದ ಕೆಳಗೆ ಬೀಳುವ ಸ್ಥಳದಲ್ಲಿ ಮರಳನ್ನು ಹಾಕಲಾಗಿದೆ. ಹೈಜಂಪ್ ಮಾಡಲು ಪೋಲ್ ಇಲ್ಲದ ಕಾರಣ ಕೋಲಿನಿಂದ ತಯಾರಿಸಲಾಗಿದೆ. ಕೇವಲ ಬರ್ಮುಡಾ ಧರಿಸಿರುವ ಒಬ್ಬ ಯುವಕ ಹಳ್ಳಿಯ ಹಾದಿಯಲ್ಲಿ ಓಡಿ ಬಂದು ಮಣ್ಣಿನ ಇಳಿಜಾರಿನಿಂದ ಜಿಗಿಯುತ್ತಾನೆ. ಒಂದೇ ಬಾರಿಗೆ ಈ ಯುವಕ 10 ರಿಂದ 12 ಅಡಿ (ವೀಡಿಯೊ ನೋಡಿ ಅಂದಾಜು) ಎತ್ತರ ಜಿಗಿಯುತ್ತಾನೆ. ಕೆಳಗೆ ಬರುವಾಗಲೂ ಅವನು ಸುರಕ್ಷಿತವಾಗಿ ಇಳಿಯುತ್ತಾನೆ. ಅದೇ ಸಮಯದಲ್ಲಿ, ಆತನ ಇತರ ಸ್ನೇಹಿತರು ಅವನ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದಾರೆ. ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸುತ್ತಿದೆ.

ಗ್ರಾಮದಲ್ಲಿವೆ ನೈಜ ಪ್ರತಿಭೆಗಳು: ಜಿಂದಗಿ ಗುಲ್ಜಾರ್ ಹೈ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ 13 ಸೆಕೆಂಡುಗಳ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಇದನ್ನು ಪೋಸ್ಟ್ ಮಾಡುವಾ ಅದ್ಭುತ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ. ಗ್ರಾಮಗಳಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ, ಅಂದರೆ ಪ್ರತಿಭೆಗಳು ಗ್ರಾಮಗಳಲ್ಲಿಯೇ ಬೆಳೆಯುತ್ತವೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾವಿರಾರು ವೀಕ್ಷನೆಗಳನ್ನು ಪಡೆದಿದ್ದು, ನೂರಾರು ಜನರು ರಿಟ್ವೀಟ್ ಮಾಡಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ಯುವಕನ ಸಾಹಸವನ್ನು ಜನರು ಮೆಚ್ಚಿದ್ದಾರೆ. ಇದಕ್ಕೆ ಒಬ್ಬ ನೆಟ್ಟಿಗ 'ನಿಜವಾದ ಪ್ರತಿಭೆಗಳು ಹಳ್ಳಿಗಳಲ್ಲಿ ವಾಸಿಸುತ್ತವೆ, ಅವರನ್ನು ಹುಡುಕುವ ಅಗತ್ಯವಿದೆ. ಮತ್ತೊಬ್ಬ ನೆಟ್ಟಿಗ ಇಂತಹ ಗ್ರಾಮೀಣ ಪ್ರತಿಭೆಗಳೇ ದೇಶವನ್ನು ಪ್ರತಿನಿಧಿಸಲು ಒಲಿಂಪಿಕ್ಸ್‌ಗೆ ಹೋಗುವ ನಿಜವಾದ ಆಕಾಂಕ್ಷಿಗಳು. ಆದಾಗ್ಯೂ, ಅವರ ಪ್ರತಿಭೆಗೆ ವೇದಿಕೆ ಸಿಗುತ್ತಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries