HEALTH TIPS

ಮೃತಪಟ್ಟರೂ ನೆಮ್ಮದಿ ನೀಡದ ರಾಜಕೀಯ ಹಸ್ತಕ್ಷೇಪ:ಕೇರಳದಲ್ಲಿ ಮಾತ್ರ: ಎಂಎಂ ಲಾರೆನ್ಸ್ ಅಂತಿಮ ಕರ್ಮಕ್ಕೆ ಮುಳವಾದ ಸಿಪಿಎಂ: ಮಕ್ಕಳಿಂದ ಟೀಕೆ

ಕೊಚ್ಚಿ: ಹಿರಿಯ ಸಿಪಿಎಂ ನಾಯಕ ಎಂ.ಎಂ.ಲಾರೆನ್ಸ್ ಶನಿವಾರ ಮೃತಪಟ್ಟಿದ್ದು, ವಿಚಿತ್ರವೆಂಬಂತೆ ಅವರ ಅಂತ್ಯಸಂಸ್ಕಾರಕ್ಕೆ ಸ್ಥಳೀಯ ಸಿಪಿಎಂ ನೇತೃತ್ವ ಅಡ್ಡಗಾಲು ಹಾಕಿ ಪ್ರದೇಶವನ್ನು ಕೆಣಕಿದೆ. ಲಾರೆನ್ಸ್ ಅವರು ಬಯಸದಿದ್ದರೂ ಅವರ ಮೃತದೇಹವನ್ನು ದಾನ ನೀಡಬೇಕೆಂದು ಒತ್ತಾಯಿಸಿ ಬೆದರಿಕೆ ಹಾಕಿದೆ. ಆದರೆ ಈ ಬಗ್ಗೆ ಒಪ್ಪಿಗೆ ಇಲ್ಲವೆಂದು ಪುತ್ರ ಹಾಗೂ ಪುತ್ರಿ ತಿಳಿಸಿದ್ದು, ಬಳಿಕ ವಿಷಯ ನ್ಯಾಯಾಲಯದ ಮೆಟ್ಟಲೇರಿದೆ.

ಪಕ್ಷ ವಂಚಿಸುತ್ತಿದ್ದು,ಲಾರೆನ್ಸ್ ಅವರ ಕೊನೆಯ ಪಯಣ ನಿರ್ಧಋಇಸಲು ನಮಗೆ ಹಕ್ಕಿಲ್ಲವೇ ಎಂದು  ಪುತ್ರಿ ಆಶಾ ಲಾರೆನ್ಸ್ ಕೇಳಿದ್ದಾರೆ.

ಆಶಾ ಲಾರೆನ್ಸ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ತಾನು ಸತ್ತರೆ ವೈದ್ಯಕೀಯ ಕಾಲೇಜಿಗೆ ದೇಹವನ್ನು ದಾನ ಮಾಡುವುದಾಗಿ ತಂದೆ ಹೇಳಿರಲಿಲ್ಲ ಎಂದಿರುವರು.

ಪ್ರಪಂಚದ ಜನರು ತಿಳಿದುಕೊಳ್ಳಿ, ಕಮ್ಯುನಿಸ್ಟ್ ವಂಚನೆ! ಪಕ್ಷಕ್ಕಾಗಿ ಪ್ರಾಣ ತ್ಯಾಗ ಮಾಡಿದ ಒಡನಾಡಿಗೆ ಮಾಡಿದ ಕೊನೆಯ ಕ್ರೂರ ದ್ರೋಹ ಮತ್ತು ಕ್ರೂರ ಕೃತ್ಯ ಎಂದು ಆಶಾ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಹಿರಿಯ ಪುತ್ರ ಪಕ್ಷದ ಗುಲಾಮನಾಗಿದ್ದರಿಂದ ತನ್ನ ತಂದೆಗೆ ಕಮ್ಯುನಿಸ್ಟ್ ದ್ರೋಹದಲ್ಲಿ ಭಾಗಿಯಾಗಿದ್ದಾನೆ ಎಂದು ಅವರು ಬಹಿರಂಗವಾಗಿ ಹೇಳಿದಳು. ತನ್ನ ತಂದೆ ಲಾರೆನ್ಸ್‍ಗಿಂತ ದೊಡ್ಡ ನಾಸ್ತಿಕರಾಗಿದ್ದರು. ಆದರೆ ಅವರ ಅಂತಿಮ ವಿಧಿವಿಧಾನಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಸಬೇಕು ಎಂದು ಆಶಾ ಲಾರೆನ್ಸ್ ಸ್ಪಷ್ಟಪಡಿಸಿದ್ದಾರೆ. ಚರ್ಚ್‍ನಲ್ಲಿ ನಾವು ನಾಲ್ಕು ಮಕ್ಕಳಿಗೆ ಮದುವೆ ಮಾಡಿದ್ದರು. ಲಾರೆನ್ಸ್ ಎಲ್ಲದರ ಭಾಗವಾಗಿದ್ದಾರೆ. ತಂದೆ ತನ್ನ ಮೊಮ್ಮಕ್ಕಳ ಬ್ಯಾಪ್ಟಿಸಮ್‍ಗೆ ಹಾಜರಾಗಿದ್ದರು ಮತ್ತು ಚರ್ಚ್‍ನಲ್ಲಿ ತನ್ನ ತಾಯಿಯನ್ನು ನೋಡಿ ವಿವಾಹವಾದವರು ಎಂದು ಆಶಾ ಹೇಳಿದರು. ಯಾರದೋ ಮನವೊಲಿಸಲು ಈ ನಾಟಕ ಮಾಡಲಾಗುತ್ತಿದೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ವಯೋಸಹಜ ಕಾಯಿಲೆಗಳಿಂದಾಗಿ ಶನಿವಾರ ಕೊಚ್ಚಿ ಆಸ್ಪತ್ರೆಯಲ್ಲಿ ಎಂ.ಎಂ. ಲಾರೆನ್ಸ್ ಮೃತಪಟ್ಟಿದ್ದರು. ಸಾರ್ವಜನಿಕ ದರ್ಶನಕ್ಕೆ ಇರಿಸಿದ ನಂತರ ಇಂದು ಸಂಜೆ ಶವವನ್ನು ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಗುವುದು ಎಂದು ಸಿಪಿಎಂ ಹೇಳಿಕೊಂಡಿತ್ತು. ಇಂದು ಬೆಳಿಗ್ಗೆ 8 ರಿಂದ 8.30 ರವರೆಗೆ ಗಾಂಧಿನಗರದ ಅವರ ನಿವಾಸದಲ್ಲಿ, 8.30 ರಿಂದ 9 ರವರೆಗೆ ಲೆನಿನ್ ಸೆಂಟರ್‍ನಲ್ಲಿ ಮತ್ತು ಸಂಜೆ 4 ರಿಂದ ಎರ್ನಾಕುಳಂ ಟೌನ್ ಹಾಲ್‍ನಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries