ಕಾಸರಗೋಡು: ಗಡಿನಾಡು ಕಾಸರಗೋಡಿನ ಸಾಂಸ್ಕøತಿಕ- ಸಾಹಿತ್ಯ ವಲಯದ ಪ್ರಧಾನ ತಾಣವಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಸೆ. 14ರಂದು , ಬೆಳಗ್ಗೆ 9ರಿಂದ ಮಂಗಳೂರು ಅತ್ತಾವರದ ಕೆ.ಎಂ.ಸಿ.ಆಸ್ಪತ್ರೆ ಸಹಕಾರ ಹಾಗೂ ಪ್ರತಿಷ್ಠಾನದ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಡಾ. ಅರವಿಂದ ಎನ್. ಬಿ. ಅವರ ನೇತೃತ್ವದಲ್ಲಿ ನಡೆಯುವ ಶಿಬಿರದಲ್ಲಿ ಎಲುಬು ಮತ್ತು ಕೀಲು ರೋಗ, ಸಾಮಾನ್ಯ ರೋಗ ವಿಭಾಗ, ಕಣ್ಣಿನ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಚರ್ಮರೋಗ ತಪಾಸಣೆ, ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ, ಬಿ.ಪಿ, ಶುಗರ್ ತಪಾಸಣೆಯೊಂದಿಗೆ ಉಚಿತ ಔಷಧ ವಿತರಿಸಲಾಗುವುದು. ಫಲಾನುಭವಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಕೆ.ಎಂ.ಸಿ.ಆಸ್ಪತ್ರೆಯ ಹಸಿರು ಕಾರ್ಡು ನೀಡಲಾಗುವುದು. ಒಂದು ತಿಂಗಳ ಮಾನ್ಯತೆ ಹೊಂದಿರುವ ಈ ಕಾರ್ಡ್ ಮುಖಾಂತರ ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.