ಮುಂಬೈ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ ಘಟನೆ ವಿರೋಧಿಸಿ 'ಮಹಾ ವಿಕಾಸ್ ಅಘಾಡಿ'(ಎಂವಿಎ) ಮುಖಂಡರು ಭಾನುವಾರ ದಕ್ಷಿಣ ಮುಂಬೈನ ಹುತಾತ್ಮ ಚೌಕ್‌ನಿಂದ ಗೇಟ್‌ವೇ ಆಫ್ ಇಂಡಿಯಾದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮುಂಬೈ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ ಘಟನೆ ವಿರೋಧಿಸಿ 'ಮಹಾ ವಿಕಾಸ್ ಅಘಾಡಿ'(ಎಂವಿಎ) ಮುಖಂಡರು ಭಾನುವಾರ ದಕ್ಷಿಣ ಮುಂಬೈನ ಹುತಾತ್ಮ ಚೌಕ್‌ನಿಂದ ಗೇಟ್‌ವೇ ಆಫ್ ಇಂಡಿಯಾದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ಘೋಷಣಾ ಫಲಕಗಳನ್ನು ಪ್ರದರ್ಶಿಸಿದ ಕಾರ್ಯಕರ್ತರು, ಏಕನಾಥ ಶಿಂದೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
'ಪ್ರತಿಮೆ ಅನಾವರಣಗೊಳಿಸಿ ಎಂಟು ತಿಂಗಳಲ್ಲೇ ಕುಸಿದು ಬಿದ್ದಿದೆ. ಮಹಾರಾಷ್ಟ್ರ ಜನರ ಆಕ್ರೋಶಕ್ಕೆ ಧ್ವನಿ ನೀಡಲು ಈ ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತಿದ್ದೆವೆ' ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ರಾಜೇಶ್ ಟೋಪೆ ತಿಳಿಸಿದರು.
ಕಾಂಗ್ರೆಸ್ ಸಂಸದ ಶಾಹು ಛತ್ರಪತಿ, ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಮತ್ತು ಶಾಸಕ ಅನಿಲ್ ದೇಶಮುಖ್ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.