ತಿರುವನಂತಪುರಂ: ವಿಕಲಚೇತನ ಸಮುದಾಯವನ್ನು ಮುನ್ನೆಲೆಗೆ ಕರೆತರುವ ಅಂಗವಾಗಿ ಡಿಫರೆಂಟ್ ಆರ್ಟ್ ಸೆಂಟರ್‍ನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಿನಾಥ್ ಮುತ್ತುಕ್ಕಾಡ್ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಾರತ ಯಾತ್ರೆಯ ರಾಜ್ಯಮಟ್ಟದ ಉದ್ಘಾಟನೆ ಮತ್ತು ಧ್ವಜ ಹಸ್ತಾಂತರ ಸಮಾರಂಭವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸಿದರು.
ಉನ್ನತ ಶಿಕ್ಷಣ ಸಚಿವೆ ಡಾ.ಆರ್. ಬಿಂದು ಅಧ್ಯಕ್ಷತೆ ವಹಿಸಿದ್ದರು. ಇಂಕ್ಲೂಸಿವ್ ಭಾರತ್ ಯಾತ್ರಾ ಬ್ರಾಂಡ್ ಅಂಬಾಸಿಡರ್ ಮತ್ತು ಪ್ಯಾರಾಲಿಂಪಿಯನ್ ಬೋನಿಫೇಸ್ ಪ್ರಭು, ಡಿಫರೆಂಟ್ ಆರ್ಟ್ ಸೆಂಟರ್ ನಿರ್ದೇಶಕ ಜಯದಾಲಿ ಎಂವಿ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಿನಾಥ್ ಮುತ್ತುಕ್ಕಾಡ್ ಮತ್ತು ನಿರ್ದೇಶಕಿ ಶೈಲಾ ಥಾಮಸ್ ಉಪಸ್ಥಿತರಿದ್ದರು.
ಸಂಜ್ಞಾ ಭಾಷೆಯ ಹಿನ್ನಲೆಯಲ್ಲಿ ನೃತ್ಯಗಾರ್ತಿ ಮೆಥಿಲ್ ದೇವಿಕಾ ಅವರ ನೃತ್ಯ ಪ್ರದರ್ಶನ ಹಾಗೂ ಖ್ಯಾತ ಬುಲ್ಬುಲ್ ವಾದಕ ಉಲ್ಲಾಸ್ ಪೊನ್ನಾಡಿ ಅವರ ಸಂಗೀತ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.
ಯಾತ್ರೆಯು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯಡಿಯಲ್ಲಿ ಡಿಇಪಿಡಬ್ಲ್ಯುಡಿ ಯಿಂದ ಅನುಮೋದಿಸಲ್ಪಟ್ಟಿದೆ, ಇದು ವಿಶ್ವ ಸೆರೆಬ್ರಲ್ ಪಾಲ್ಸಿ ದಿನವಾದ ಅಕ್ಟೋಬರ್ 6 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಡಿಸೆಂಬರ್ 3 ರಂದು ವಿಶ್ವ ಅಂಗವಿಕಲರ ದಿನದಂದು ದೆಹಲಿಯಲ್ಲಿ ಕೊನೆಗೊಳ್ಳುತ್ತದೆ.