HEALTH TIPS

ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ | ಎರಡನೇ ಹಂತದ ಮತದಾನ: ಬಿಗಿ ಭದ್ರತೆ

 ಶ್ರೀನಗರ: ಜಮ್ಮು- ಕಾಶ್ಮೀರ ವಿಧಾನಸಭೆಯ 26 ಕ್ಷೇತ್ರಗಳಿಗೆ ಬುಧವಾರ ಎರಡನೇ ಹಂತದ ಮತದಾನ ನಡೆಯಲಿದೆ.

ಆರು ಜಿಲ್ಲೆಗಳ 25.78 ಲಕ್ಷ ಮತದಾರರು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮಾಜಿ ಸ್ಪೀಕರ್‌ ಮುಬಾರಕ್‌ ಗುಲ್‌, ಜಮ್ಮು-ಕಾಶ್ಮೀರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ತಾರಿಕ್‌ ಹಮೀದ್ ಕರ್ರಾ ಸೇರಿದಂತೆ 239 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಪಿಡಿಪಿಯ ಮಾಜಿ ಸಚಿವರಾದ ಆಸಿಯಾ ನಕಾಶ್‌, ಗುಲಾಂ ನಬಿ ಹಂಜೂರಾ, ಜೈಲಿನಲ್ಲಿರುವ ಪ್ರತ್ಯೇಕತಾವಾದಿ ನಾಯಕ ಸರ್ಜನ್‌ ಅಹ್ಮದ್‌ ವಾಗೇ, ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್ ಬುಖಾರಿ, ಮಾಜಿ ಸಚಿವರಾದ ಅಲಿ ಮೊಹಮ್ಮದ್ ಸಾಗರ್ ಸಹ ಚುನಾವಣಾ ಅಖಾಡದಲ್ಲಿರುವ ಪ್ರಮುಖ ಅಭ್ಯರ್ಥಿಗಳು.

ನಗರ ಪ್ರದೇಶದಲ್ಲಿ 1,056 ಹಾಗೂ ಗ್ರಾಮೀಣ ಪ್ರದೇಶದಲ್ಲಿ 2,446 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪಾರದರ್ಶಕತೆಯ ಖಚಿತತೆಗಾಗಿ ಎಲ್ಲ ಮತಗಟ್ಟೆಗಳು ವೆಬ್‌ಕಾಸ್ಟಿಂಗ್‌ ಸೌಲಭ್ಯ ಹೊಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವಾಹನಗಳ ಮೇಲೆ ಕಣ್ಗಾವಲಿಡಲಾಗಿದೆ.

ಸೆ. 18ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 61.38ರಷ್ಟು ಮತದಾನವಾಗಿತ್ತು. ಮೂರನೇ ಹಂತದ ಮತದಾನವು ಅಕ್ಟೋಬರ್‌ 1ರಂದು ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries