ಮಧೂರು: ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರಿಯ ನಾಟ್ಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಯಕ್ಷಗಾನ ಶಿಕ್ಷಕರಿಗೆ ಶಿಕ್ಷಣ ವನ್ನು ಸಿರಿ ಬಾಗಿಲು ಪ್ರತಿಷ್ಠಾನದಲ್ಲಿ ಆರಂಭಿಸಲಾಯಿತು. ಕಾರ್ಯಕ್ರಮಕ್ಕೆ ಅಮೆರಿಕದಿಂದ ಆಗಮಿಸಿದ ಕಲಾಪೋಷಕ ದಿನೇಶ ಶ್ರೀನಿವಾಸರಾವ್ ಮತ್ತು ಪಣಂಬೂರು ವೆಂಕಟರಾಯ ಐತಾಳರ ಪುತ್ರಿ ಮನೋರಮಾ ದಿನೇಶ ಶ್ರೀನಿವಾಸರಾವ್ ಹಾಗೂ ಕರ್ನಾಟಕ ಬ್ಯಾಂಕ್ ನ ಡಿ. ಜಿ. ಎಂ. ವಸಂತ ಹೇರ್ಳೆ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು. ಯಕ್ಷಗಾನ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಪ್ರತಿಷ್ಠಾನ, ಪ್ರತಿಷ್ಠಾನದಲ್ಲಿ ಪಣಂಬೂರು ವೆಂಕಟ್ರಾಯ ಐತಾಳರ ಹೆಸರಿನ ತೆಂಕುತಿಟ್ಟು ಯಕ್ಷಗಾನ ಮ್ಯೂಸಿಯಂ, ಇದೊಂದು ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿದೆ. ಸಾಂಸ್ಕೃತಿಗೆ ಭವನಕ್ಕೆ ಅಧ್ಯಯನಕ್ಕೆ ಬರುವವರಿಗೆ ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿ. ಇದರ ಸದುಪಯೋಗವನ್ನು ಎಲ್ಲರು ಪಡೆಯುವಂತಾಗಲಿ, ಎಂದು ಮನೋರಮಾ ದಿನೇಶ ಶ್ರೀನಿವಾಸರಾವ್ ತಿಳಿಸಿದರು.
ಸಾಂಸ್ಕೃತಿಕ ವಲಯಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕ ಬ್ಯಾಂಕ್ ತಮ್ಮಿಂದಾಗುವ ಸಹಕಾರದ ಕೊಡುಗೆ ನೀಡುತ್ತಿದೆ. ಕರ್ನಾಟಕ ಬ್ಯಾಂಕಿನ ಹೊಸ ಯೋಜನೆಗಳನ್ನು ಗ್ರಾಹಕರಿಗೆ ಶ್ರೀ ವಸಂತ ಹೇರ್ಳೆ ಯವರು ಮನವರಿಕೆ ಮಾಡಿದರು. ಶ್ರೀ ದಿನೇಶ ಶ್ರೀನಿವಾಸರಾವ್ ಮತ್ತು ಮನೋರಮಾ ರಾವ್ ಅವರನ್ನು ಸಿರಿಬಾಗಿಲು ಪ್ರತಿಷ್ಠಾನದ ಮಹಾಪೋಷಕವಾಗಿ ಗೌರವಿಸಲಾಯಿತು. ವಸಂತ ಹೇರ್ಳೆ ಯವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್, ಶ್ರೀ ಲಕ್ಷ್ಮಿನಾರಾಯಣ ತಂತ್ರಿ ಕಾವು ಮಠ, ಜಗದೀಶ್ ಕೂಡ್ಲು, ಸುಮಿತ್ರಾ ಮಯ್ಯ ಮುಂತಾದವರು ಉಪಸ್ಥಿತರಿದ್ದರು. ರಾಮಕೃಷ್ಣಯ್ಯ ಸ್ವಾಗತಿಸಿದರು.ಡಾ. ಶ್ರುತ ಕೀರ್ತಿ ರಾಜ್ ನಿರೂಪಿಸಿದರು. ಬಳಿಕ 20 ಕ್ಕೂ ಹೆಚ್ಚು ಶಿಕ್ಷಕರಿಗೆ ಪ್ರಥಮ ಹಂತದಲ್ಲಿ ಕರ್ಗಲ್ಲು ಗುರುಗಳಿಂದ ಶಿಕ್ಷಣ ನಡೆಯಿತು.