ಕಾಸರಗೋಡು: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯ ಯಶಸ್ವಿಗಾಗಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ವಲಯ ಸಮಿತಿ ರಚನಾ ಸಭೆ ಚೌಕಿ ಎರಿಯಕೋಟ ಶ್ರೀ ಭಗವತಿ ಕ್ಷೇತ್ರದ ಸರೋವರಂ ಸಭಾಂಗಣದಲ್ಲಿ ನಡೆಯಿತು.
ಮಧೂರು ಕ್ಷೇತ್ರದ ಜೀರ್ಣೋದಾರ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಗಿರೀಶ್ ಕೆ ಸಂಧ್ಯ ಕೂಡ್ಲು, ಮುರಳಿ ಗಟ್ಟಿ ಮಧೂರು, ಯೋಗೀಶ್ ನಾಯಕ್ ಮಧೂರು,ಲಕ್ಷ್ಮಣ ಪೆರಿಯಡ್ಕ, ರವೀಂದ್ರ ರೈ ಸಿರಿಬಾಗಿಲು, ಅಪ್ಪಯ್ಯ ನಾಯಕ್ ಮಧೂರು, ಟಿ.ಡಿ ಮುರಳಿ ಕುಮಾರ್ ಬಂದಡ್ಕ ಮೊದಲಾದವರು ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದರು.
ಮೊಗ್ರಾಲ್ ಪುತ್ತೂರು ವಲಯ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಕಾಶ್ ಪಟ್ಟೇರಿ ಕಾವು ಮಠ, ಅಧ್ಯಕ್ಷರಾಗಿ ಚಂದ್ರಶೇಖರ ಕಾರ್ನವರ್ ಎರಿಯಕೋಟ ಭಗವತೀ ಕ್ಷೇತ್ರ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭನ್ ಬಳ್ಳೂರು ಹಾಗೂ ಕಾರ್ಯದರ್ಶಿಯಾಗಿ ಲೋಕೇಶ್ ಎಂ ಬಿ ಆಚಾರ್ ಕಂಬಾರು ಅವರನ್ನು ಆಯ್ಕೆ ಮಾಡಲಾಯಿತು.
ಪ್ರಮೀಳಾ ಮಜಲ್,ವಾಸುದೇವ ಕಾರಂತ ಉಜಿರೆಕೆರೆ, ಕಮಲಾಕ್ಷ ಕೆ ಬಿ , ಶೀನ ಶೆಟ್ಟಿ ಬಳ್ಳೂರು, ಬಾಬು ಪೂಜಾರಿ ಬಳ್ಳೂರು, ನಾರಾಯಣ ಆಚಾರ್ಯ ಕಂಬಾರು,ಬಾಲಕೃಷ್ಣ ಶೆಟ್ಟಿ, ಬಳ್ಳೂರು , ಉಮೇಶ್ ಕಾವು ಗೋಳಿ ಕಡಪ್ಪರ, ಹರೀಶ್ ಪೆರ್ನಡ್ಕ, ಶಿವಪ್ಪ ಗಟ್ಟಿ ಹರಿಜಾಲ್, ರಾಮಕೃಷ್ಣ ರೈ ಕೋಟೆಕುಂಜ, ಸುರೇಂದ್ರ ಕೊರುವೈಲು, ನಾರಾಯಣ ಕೆ. ಕೆ. ವೀಡು ತರವಾಡು, ಸುರೇಂದ್ರ ನಾಯಕ್, ಬಾಲಕೃಷ್ಣ ಬಿ ಬಳ್ಳೂರು, ಸರೋಜಿನಿ ಎರಿಯಕೋಟ, ಸಿಂಧೂ ಶಶಿಧರ್ ಎರಿಯಾಕೋಟ, ಕಿರಣ್ ಕಡಪುರ, ಸಚಿನ್ ಕಲ್ಲಂಗೈ, ಹರ್ಷವರ್ಧನ ನಾಯಕ್, ವಸಂತ ನಾಯಕ್ ಹಾಗೂ ಕಂಬಾರು, ದೇಶಮಂಗಲ, ಕೋಟೆ ಕುಂಜ, ಮಠ ಪುತ್ತೂರುಕೊಟ್ಯ, ಮಜಲು,ಬಳ್ಳೂರು,ಅರಣೆಗುಡ್ಡೆ,ಪಂಜದಗುಡ್ಡೆ,ಎರಿಯಾ ಕೋಟ, ಹರಿಜಾಲ್, ಪೆರಿಯಡ್ಕ, ಪೆರ್ನಡ್ಕ, ಕಾವುಗೋಳಿ, ಚೌಕಿ, ಕೇಳುಗುಡ್ಡೆ, ಎರಿಯ, ಬೆದ್ರಡ್ಕ, ಕೊರುವೈಲು ಸೇರಿದಂತೆ ವಿವಿಧ ಪ್ರದೇಶಗಳಿಂದ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಭಾಸ್ಕರ ಗಟ್ಟಿ ಹೊಸಮನೆ ಸ್ವಾಗತಿಸಿದರು. ಜಗದೀಶ್ ಆಚಾರ್ಯ ಕಂಬಾರು ವಂದಿಸಿದರು ಶಶಿಧರ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.