ಕುಂಬಳೆ : ಹಣದ ವ್ಯವಹಾರಕ್ಕೆ ಸಂಬಂಧಿಸಿ ಮುತ್ತತ್ತೋಡಿ ನಿವಾಸಿಯನ್ನು ಕಾರಿನಲ್ಲಿ ಅಪಹರಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಬಂಬ್ರಾಣ ನಿವಾಸಿ ಮೂಸಾ (33) ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ, ತಲೆಮರೆಸಿಕೊಂಡಿರುವ ಆರಿಕ್ಕಾಡಿಯ ಅಬೂಬಕರ್ ಸಿದ್ದೀಕ್‍ಗಾಗಿ ಪೆÇಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮುಟ್ಟತ್ತೋಡಿ ನಿವಾಸಿ ಸುಲೈಮಾನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸೆ. 25 ರಂದು ಮಂಗಳೂರಿನಲ್ಲಿದ್ದ ಸುಲೈಮಾನ್ ಅವರನು ಆರಿಕ್ಕಾಡಿಗೆ ಕರೆಸಿಕೊಂಡ ಇಬ್ಬರು ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಕೊಡಿಯಮ್ಮ ಮತ್ತು ಉಳುವಾರು ಎಂಬಲ್ಲಿ ಕರೆದೊಯ್ದು ಥಳಿಸಿ ಬಿಡುಗಡೆಗೊಳಿಸಿದ್ದರುದೀ ಬಗ್ಗೆ ಸುಲೈಮಾನ್ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಕುಂಬಳ ಎಸ್.ಐ ಶ್ರೀಜೇಶ್ ನೇತೃತ್ವದ ಪೆÇಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ಮೂಸಾ ವಿರುದ್ಧ ಕುಂಬಳೆ ಠಾಣೆಯಲ್ಲಿ ಈ ಹಿಂದೆಯೂ ಕೆಲವೊಂದು ಪ್ರಕರಣ ದಾಖಲಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಾಘಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.