ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಕಾರ್ಯಕ್ರಮ ಆಯೋಜಿಸಲಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಶಿತ್ ಕೆ. ಅಧ್ಯಕ್ಷತೆ ವಹಿಸಿದ್ದರು. ಮಲಯಾಳಂ ವಿಭಾಗದ ಪ್ರಾಧ್ಯಾಪಕಿ ವಿನೀಶ ಎಸ್.ವಿ.ಸಂಪನ್ಮೂಲ ವ್ಯಕ್ತಿಯಾಗಿ bಚಿಗವಹಿಸಿ ಮಾತನಾಡಿ ನಮ್ಮ ಸಮಾಜದ ಅಭಿವೃದ್ಧಿ ಹಾಗೂ ಏಳಿಗೆಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿ ದೇಶದ ಏಳಿಗೆಗೆ ಶ್ರಮಿಸುವಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದರು. ಸ್ವಯಂ ಸೇವಕಿ ಮೇಘ ಸ್ವಾಗತಿಸಿ, ಅನಘ ವಂದಿಸಿದರು. ಅನುಜ್ಞಾ ನಿರೂಪಿಸಿದರು.