ಕಾಸರಗೋಡು: ವಿಶ್ವ ರೇಬೀಸ್ ವಿರುದ್ಧ ದಿನವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಟೆಲಿಮೆಡಿಸಿನ್ ಸಭಾಂಗಣದಲ್ಲಿ ಆಯೋಜಿಸಲಾಯಿತು. "ಆದ್ರ್ರ'ನೋಡಲ್ ಅಧಿಕಾರಿ ಡಾ. ಅರುಣ್ ಪಿ.ವಿ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಎಂ.ಸಿ.ಎಚ್ ಅಧಿಕಾರಿ ಶೋಭಾ ಎಂ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭ ಜೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್‍ಗಳಿಗಾಗಿ ಆಯೋಜಿಸಲಾಗಿದ್ದ ಜಾಗೃತಿ ತರಗತಿಯಲ್ಲಿ ಆನಂದಾಶ್ರಮ ಕುಟುಂಬ ಆರೋಗ್ಯ ಕೇಂದ್ರದ ಸಹಾಯಕ ಶಸ್ತ್ರಚಿಕಿತ್ಸಕ ಡಾ. ವಿದ್ಯಾ ಕೆ, ಸಹಾಯಕ ಆರ್.ಸಿ. ಎಚ್ ಅಧಿಕಾರಿ ಡಾ. ಬಾಸಿಲ್ ವರ್ಗೀಸ್ ಹಾಗೂ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ತರಗತಿ ನಡೆಸಿದರು. ರೇಬೀಸ್ ಚುಚ್ಚುಮದ್ದು ಸಂಶೋಧಕ ಲೂಯಿಸ್ ಪಾಶ್ಚರ್ ಅವರ ಸಂಸ್ಮರಣಾ ದಿನವಾದ ಸೆಪ್ಟೆಂಬರ್ 28ನ್ನು ವಿಶ್ವ ರೇಬೀಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಅನೇಕ ಜನರ ಜೀವತೆಗೆಯುವ ರೇಬೀಸ್ ಅನ್ನು ವ್ಯಾಕ್ಸಿನೇಷನ್ ಮೂಲಕ ತಡೆಗಟ್ಟಬಹುದು. ಈ ಬಗ್ಗೆ ರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಭಾರತ ಎದುರಿಸುತ್ತಿರುವ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ರೇಬೀಸ್ ಕೂಡ ಒಂದಾಗಿದ್ದು, ಭಾರತದಲ್ಲಿ ಪ್ರತಿ ವರ್ಷ ಸುಮಾರು 20,000 ಜನರು ಈ ಕಾಯಿಲೆಗೆ ತುತ್ತಾಘುತ್ತಿದ್ದಾರೆ. ಶೇ. 99ಜನರು ನಾಯಿಗಳು ಮತ್ತು ಬೆಕ್ಕುಗಳಂತಹ ಪ್ರಾಣಿಗಳಿಂದ ರೇಬೀಸ್‍ಗೆ ಒಳಗಾಗುತ್ತಾರೆ. ಕೋತಿ, ಅಳಿಲು, ನರಿ ಮತ್ತು ತೋಳಗಳಂತಹ ಪ್ರಾಣಿಗಳು ಸಹ ರೇಬೀಸ್‍ಗೆ ಕಾರಣವಾಗಬಲ್ಲುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಸಹಾಯಕ ಅಧಿಕಾರಿ ಸಯನಾ ಎಸ್ ಸ್ವಾಗತಿಸಿದರು. ರಾಷ್ಟ್ರೀಯ ಆರೋಗ್ಯ ಮಿಷನ್ ಕಿರಿಯ ಸಲಹೆಗಾರ ಕಮಲ್ ಕೆ ಜೋಸ್ ವಂದಿಸಿದರು.