ಶಬರಿಮಲೆ: ಶಬರಿಮಲೆ ದೇವಸ್ಥಾನದ ಗರ್ಭಗುಡಿ ಓಣಂ ಪೂಜೆಗಾಗಿ ಶುಕ್ರವಾರ ಸಂಜೆ ತೆರೆಯಲಾಗಿದೆ. ಮೇಲ್ಶಾಂತಿ ಪಿ.ಎನ್.ಮಹೇಶ ನಂಬೂದಿರಿ ಬಾಗಿಲು ತೆರೆದು ದೀಪ ಬೆಳಗಿಸಿದರು.
ಸಹಸ್ರಾರು ಭಕ್ತರು ಸನ್ನಿಧಾನಕ್ಕೆ ಆಗಮಿಸಿ ಅಯ್ಯಪ್ಪ ಪೂಜೆ ಸಲ್ಲಿಸಿದರು. ಕನ್ಯಾಮಾಸ ಪೂಜೆಗಳೂ ಇರುವುದರಿಂದ ಭಕ್ತರಿಗೆ ಸತತ ಒಂಬತ್ತು ದಿನಗಳ ಕಾಲ ಅಯ್ಯಪ್ಪನ ದರ್ಶನಕ್ಕೆ ಅವಕಾಶವಿದೆ.
ಸೆಪ್ಟೆಂಬರ್ 21 ರಂದು ಕನ್ಯಾಮಾಸ ಪೂಜೆಯ ನಂತರ ಬಾಗಿಲು ಮುಚ್ಚಲಾಗುತ್ತದೆ. ಇಂದಿನಿಂದ ಸೆ.21 ರ ವರೆಗೆ ಪ್ರತಿದಿನ ತುಪ್ಪದ ಅಭಿಷೇಕವಿರಲಿದೆ.
ಉತ್ರಾಡಂ, ತಿರುವೋಣಂ ಮತ್ತು ಅವಿಟ್ಟ ದಿನಗಳಲ್ಲಿ ಸನ್ನಿಧಾನಕ್ಕೆ ಬರುವ ಎಲ್ಲ ಭಕ್ತರಿಗೆ ಓಣ ಸದ್ಯ(ಭೋಜನ) ವ್ಯವಸ್ಥೆಗೊಳಿಸಲಾಗುವುದು. ಉತ್ರಾಡಂನಂದು ಶಬರಿಮಲೆ ಮೇಲ್ಶಾಂತಿ, ತಿರುವೋಣಂ ನಂದು ದೇವಸ್ವಂ ಸಿಬ್ಬಂದಿ ವರ್ಗ ಮತ್ತು ಅವಿಟ್ಟಂನಂದು ಪೋಲೀಸ್ ವಿಭಾಗದಿಂದ ಭೋಜನ ವ್ಯವಸ್ಥೆ ಏರ್ಪಡಿಸಲಾಗುತ್ತದೆ..