HEALTH TIPS

ಹೈದರಾಬಾದ್​ ಗಣೇಶೋತ್ಸವ: ಲಕ್ಷಾಂತರ ರೂಪಾಯಿಗೆ ಮಾರಾಟವಾಯ್ತು 'ಲಡ್ಡು'! ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!!

          ಹೈದರಾಬಾದ್‌: ಮುಂಬೈನಂತೆ ಭಾಗ್ಯನಗರಿ ಹೈದರಾಬಾದ್​ ನ ಗಣೇಶೋತ್ಸವ ಅದ್ದೂರಿತನಕ್ಕೆ ಪ್ರಸಿದ್ಧಿ ಪಡೆದಿದೆ. ಇದೇ ಸಂದರ್ಭದಲ್ಲಿ ಕೆಲವೆಡೆ ಗಣೇಶ ಪ್ರಸಾದ 'ಲಡ್ಡು' ಪ್ರತಿವರ್ಷ ಲಕ್ಷಾಂತರ ರೂ.ಗೆ ಮಾರಾಟವಾಗುವ ಮೂಲಕ ಇಡೀ ದೇಶದ ಗಮನ ತನ್ನತ್ತ ಈ ಮಾಯಾನಗರಿ ಸೆಳೆಯುತ್ತದೆ.

           ಇಲ್ಲಿ ತನಕ ಬಾಳಾಪುರ ಗಣೇಶ ಲಡ್ಡು ದುಬಾರಿ ಬೆಲೆಯದ್ದಾಗಿತ್ತು. ಇದೀಗ ಮಾದಾಪುರ ಮೈಹೋಮ್ ಭುಜ ವಿನಾಯಕ ದೇವರ ಪ್ರಸಾದದ ಲಡ್ಡು ಆ ದಾಖಲೆ ಮುರಿದಿದೆ. ಹರಾಜಿನಲ್ಲಿ ಲಡ್ಡು 29 ಲಕ್ಷ ರೂ.ಗೆ ಮಾರಾಟವಾಗಿದೆ.

            ಬಾಳಾಪುರ ಲಡ್ಡೇ ಫೇಮಸ್: ಹೈದರಾಬಾದ್​ನಲ್ಲಿ ಅಂದಾಜು 1ಲಕ್ಷ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಇವುಗಳಲ್ಲಿ ಖೈರತಾಬಾದ್ ನ ಮಹಾಗಣಪತಿ ಅದ್ದೂರಿತನ ಮತ್ತು ಇಲ್ಲಿನ ಪ್ರಸಾದವಾದ ಲಡ್ಡೂಗೆ ಫುಲ್ ಕ್ರೇಜ್ ಇದೆ. ಈವರೆಗಿನ ದಾಖಲೆಗಳೆಲ್ಲವೂ ಬಾಳಾಪುರ ಗಣೇಶನ ಲಡ್ಡುನಲ್ಲಿಯೇ ಇವೆ. ಕಳೆದ ವರ್ಷ 27 ಲಕ್ಷ ರೂ.ಗೆ ಈ ಲಡ್ಡು ಮಾರಾಟವಾಗಿತ್ತು. ಆದರೆ ಈ ಬಾರಿ ಬಾಳಾಪುರ ಗಣೇಶ ದೇವರ ಪ್ರಸಾದದ ಲಡ್ಡು ಈ ದಾಖಲೆಯನ್ನೂ ಮುರಿದು ಲಡ್ಡು 29 ಲಕ್ಷ ರೂ.ಗೆ ಮಾರಾಟವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries