ಕಾಸರಗೋಡು: ಉಪ್ಪಳ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿರುವ ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸುವುದರ ಜತೆಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ವಕೀಲ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ.
ಕೇರಳದ ಗಡಿ ಪ್ರದೇಶವಾದ ಮಂಜೇಶ್ವರ, ಉಪ್ಪಳ ಪ್ರದೇಸ ಮಾದಕ ವಸ್ತುಗಳ ಹಬ್ ಆಗಿ ಬದಲಾಗಿದ್ದು, ಮಾದಕ ವಸ್ತು ಸಂಗ್ರಹ ಹಾಗೂ ಮಾರಾಟ ಭಯಾನಕ ರೀತಿಯಲ್ಲಿ ನಡೆಯುತ್ತಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪೆÇಲೀಸು ಹಾಗೂ ನಾರ್ಕೋಟಿಕ್ ಸೆಲ್ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ದಿನವೊಂದಕ್ಕೆ ಮಾದಕ ದ್ರವ್ಯ ಸಾಗಾಟ, ಮಾರಾಟದ ಹತ್ತು ಹಲವು ಪ್ರಕರಣ ದಾಖಲಾಗುತ್ತಿದ್ದು, ಕಾಸರಗೋಡು ಜಿಲ್ಲೆಯನ್ನು ಮಾದಕದ್ರವ್ಯ ಮಾಫಿಯಾಗಳು ನಿಯಂತ್ರಿಸುವ ರೀತಿಯಲ್ಲಿ ದಂಧೆ ಬೆಳೆದು ನಿಂತಿದೆ. ಉಪ್ಪಳದ ಮನೆಯೊಂದರಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಪತ್ತೆ ಹಚ್ಚಲಾಗಿದ್ದು, ಮನೆಗಳಲ್ಲಿ ದಾಸ್ತಾನಿರಿಸಿ ಮಾದಕ ವಸ್ತು ಮಾರಾಟ ಮಾಡುತ್ತಿರಲು ಪೊಲೀಸ್ ವೈಫಲ್ಯ ಇದಕ್ಕೆ ಪ್ರಮುಖ ಕಾರಣವಾಗಿದೆ. ಪ್ರತಿ ದಿನ ಲಕ್ಷಾಂತರ ರೂ. ಮೌಲ್ಯದ ಡ್ರಗ್ಸ್ ವಸ್ತುಗಳು ಈ ಪ್ರದೇಶದಲ್ಲಿ ಮಾರಾಟವಾಗುತ್ತಿದ್ದರೆ, ಇದರ ಬಗ್ಗೆ ಸರ್ಕಾರ ಹಾಗೂ ಪೆÇಲೀಸ್ ಇಲಾಖೆ ಕಣ್ಣಾಮುಚ್ಚಾಲೆ ನಡೆಸುತ್ತಿದೆ. ಉಪ್ಪಳದಲ್ಲಿ ಹಚ್ಚಿರುವ ಡ್ರಗ್ಸ್ ಮಾಫಿಯಾ ಹಿಂದೆ ಅಂತರಾಷ್ಟ್ರೀಯ ಕೈವಾಡವಿದ್ದು, ಇದರ ಹಿಂದೆ ಕಾರ್ಯಾಚರಿಸುವವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಾಗಬೇಕೆಂದು ಶ್ರೀಕಾಂತ್ ಆರಪಿಸಿದ್ದಾರೆ.