ಜಮ್ಮು: ಜಮ್ಮು ಮತ್ತು ಕಾಶ್ಮೀರ ಚುನಾವಣೆಗೂ ಮುನ್ನ ವಿಧಾನಸಭೆಯಲ್ಲಿ ತಮ್ಮ ಪ್ರಾತಿನಿಧ್ಯಕ್ಕಾಗಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಟ್ರಾನ್ಸ್‌ಜೆಂಡರ್ ಸಮುದಾಯದ (ಲಿಂಗತ್ವ ಅಲ್ಪಸಂಖ್ಯಾತರು) ಸದಸ್ಯರು ಶನಿವಾರ ಇಲ್ಲಿ ರ‍್ಯಾಲಿ ನಡೆಸಿದರು.
ಜಮ್ಮು: ಜಮ್ಮು ಮತ್ತು ಕಾಶ್ಮೀರ ಚುನಾವಣೆಗೂ ಮುನ್ನ ವಿಧಾನಸಭೆಯಲ್ಲಿ ತಮ್ಮ ಪ್ರಾತಿನಿಧ್ಯಕ್ಕಾಗಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಟ್ರಾನ್ಸ್‌ಜೆಂಡರ್ ಸಮುದಾಯದ (ಲಿಂಗತ್ವ ಅಲ್ಪಸಂಖ್ಯಾತರು) ಸದಸ್ಯರು ಶನಿವಾರ ಇಲ್ಲಿ ರ‍್ಯಾಲಿ ನಡೆಸಿದರು.
ವಿಕ್ರಮ್ ಚೌಕ್‌ನಿಂದ ಪ್ರಾರಂಭವಾದ ರ‍್ಯಾಲಿಯು ನಗರದ ಹೃದಯಭಾಗದಲ್ಲಿರುವ ಹರಿ ಸಿಂಗ್ ಪಾರ್ಕ್‌ನಲ್ಲಿ ಸಮಾಪನಗೊಂಡಿತು.
'ವಿಧಾನಸಭೆಯಲ್ಲಿ 90 ಸ್ಥಾನಗಳಿವೆ. ಆದರೆ ಒಂದೇ ಒಂದು ಸ್ಥಾನವನ್ನು ನಮಗೆ ಮೀಸಲಿಟ್ಟಿಲ್ಲ. ಜಮ್ಮು ಮತ್ತು ಕಾಶ್ಮೀರದ ಎರಡು ವಿಭಾಗಗಳಲ್ಲಿ ನಮಗೆ ಕನಿಷ್ಠ ಒಂದು ಸ್ಥಾನವನ್ನಾದರೂ ಮೀಸಲಿಡಬೇಕೆಂದು ನಾವು ಬಯಸುತ್ತೇವೆ. ಇದರಿಂದ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಲಿದೆ' ಎಂದು ರ‍್ಯಾಲಿಯನ್ನು ಮುನ್ನಡೆಸಿದ ರವೀನಾ ಮಹಂತ್ ಅವರು ಸುದ್ದಿಗಾರರಿಗೆ ತಿಳಿಸಿದರು.
'ಈ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಹಿಂದಿನಿಂದಲೂ ನಮ್ಮ ಬೇಡಿಕೆ ನಿರಾಕರಿಸುತ್ತಾ ಬಂದಿವೆ. ಈ ಬಾರಿಯ ಚುನಾವಣೆಯಲ್ಲಾದರೂ ಮೀಸಲಾತಿ ಮತ್ತು ಪ್ರಾತಿನಿಧ್ಯಕ್ಕಾಗಿ ಟ್ರಾನ್ಸ್‌ಜೆಂಡರ್ ಸಮುದಾಯದ ಬೇಡಿಕೆಯ ಬಗ್ಗೆ ಧ್ವನಿ ಎತ್ತಲು ಈ ರ‍್ಯಾಲಿ ನಡೆಸಲಾಯಿತು' ಎಂದು ಅವರು ತಿಳಿಸಿದರು.
'ಎಲ್‌ಜಿಬಿಟಿ ಸಮುದಾಯದ ಹಕ್ಕುಗಳಿಗಾಗಿ ನಾವು ಧ್ವನಿ ಎತ್ತುವ ಹಾದಿಯಲ್ಲಿದ್ದೇವೆ. ಸರ್ಕಾರ ನಮ್ಮ ಕೂಗು ಆಲಿಸಲಿ' ಎಂದು ಅವರು ಹೇಳಿದರು.