ಕೊಟ್ಟಾಯಂ: ಮಲಯಾಳಂ ಚಿತ್ರರಂಗದ ಮಹಿಳೆಯರ ಸಮಸ್ಯೆಗಳ ಅಧ್ಯಯನಕ್ಕೆ ನೇಮಕಗೊಂಡ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯ ಪ್ರಕಾರ ಪೊಂಕುನ್ನಂ ಪೋಲೀಸರು ಮೊದಲ ಪ್ರಕರಣವನ್ನು ದಾಖಲಿಸಿದ್ದಾರೆ.
ಹೇಮಾ ಸಮಿತಿಗೆ ಹೇಳಿಕೆ ನೀಡಿದ ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ತನಿಖಾ ತಂಡವು ಹೇಮಾ ಸಮಿತಿಯ ಮುಂದೆ ಹೇಳಿಕೆ ನೀಡಿದವರನ್ನು ಭೇಟಿ ಮಾಡಿ ಅವರು ದೂರು ದಾಖಲಿಸಿದರೆ ಪ್ರಕರಣ ಕೈಗೆತ್ತಿಕೊಳ್ಳಲಿದ್ದು, ಯುವತಿಯ ದೂರಿನ ಮೇರೆಗೆ ಪೊನ್ಕುನ್ನಂ ಪೋಲೀಸರು ಮೇಕಪ್ ಮ್ಯಾನ್ ವಿರುದ್ಧ ಮೊದಲ ಪ್ರಕರಣವನ್ನು ದಾಖಲಿಸಿದ್ದಾರೆ.
ಹೇಮಾ ಸಮಿತಿ ವರದಿ ಆಧರಿಸಿ ಕೊಲ್ಲಂ ಪೂಯಮಪಲ್ಲಿ ಪೋಲೀಸರೂ ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಮೇಕಪ್ ಕಲಾವಿದ ವಾಟ್ಸಾಪ್ ಮೂಲಕ ಅಶ್ಲೀಲ ಸಂದೇಶ ರವಾನಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ. ವಿಶೇಷ ತನಿಖಾ ತಂಡವು ಹೇಮಾ ಸಮಿತಿ ವರದಿ ಕುರಿತು ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಹೈಕೋರ್ಟ್‍ಗೆ ಮಾಹಿತಿ ನೀಡಲಿದೆ.
ಕೊಲ್ಲಂ ಮತ್ತು ಕೊಟ್ಟಾಯಂನಲ್ಲಿ ಮೇಕಪ್ ಕಲಾವಿದರಾಗಿರುವ ಪುರುಷರೊಬ್ಬರ ವಿರುದ್ದ ಈ ಪ್ರಕರಣ ದಾಖಲಾಗಿದೆ.