ದುರ್ಗ್: ಮೊಬೈಲ್‌ನಲ್ಲಿ ಗೇಮ್ ಆಡುತ್ತಾ ಹಳಿ ಮೇಲೆ ಕುಳಿತಿದ್ದ ಇಬ್ಬರು ಬಾಲಕರು ರೈಲು ಹರಿದು ಸಾವಿಗೀಡಾಗಿರುವ ಘಟನೆ ಛತ್ತೀಸಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.
ದುರ್ಗ್: ಮೊಬೈಲ್‌ನಲ್ಲಿ ಗೇಮ್ ಆಡುತ್ತಾ ಹಳಿ ಮೇಲೆ ಕುಳಿತಿದ್ದ ಇಬ್ಬರು ಬಾಲಕರು ರೈಲು ಹರಿದು ಸಾವಿಗೀಡಾಗಿರುವ ಘಟನೆ ಛತ್ತೀಸಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಪದ್ಮನಾಭಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಿಸಲಿ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತಪಟ್ಟ ಬಾಲಕರಾದ ಪೂರನ್ ಸಾಹು ಮತ್ತು ವೀರ್ ಸಿಂಗ್, ಭಿಲಾಯ್ ನಗರದ ರಸಲಿ ಸೆಕ್ಟಾರ್‌ನವರು.
.ಮೊಬೈಲ್‌ನಲ್ಲಿ ಗೇಮ್ ಆಡುವುದರಲ್ಲಿ ತಲ್ಲೀನರಾಗಿದ್ದ ಮಕ್ಕಳು ರೈಲು ಬರುತ್ತಿರುವ ಶಬ್ಧವನ್ನು ಗ್ರಹಿಸಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲಿಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಕೈಗೊಂಡಿದ್ದಾರೆ.