ಬದಿಯಡ್ಕ: ಉಬ್ರಂಗಳ ಶ್ರೀ ಐವರ್ ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಕಳಿಯಾಟ ಮಹೋತ್ಸವ ನಡೆಯಲಿದ್ದು, ಇದರ ಅಂಗವಾಗಿ ಕಳಿಯಾಟ ಮಹೋತ್ಸವ ಸಮಿತಿ ಸದಸ್ಯರು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರನ್ನು ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಂದರ್ಭ ಗೌರವ ಸಲಹೆಗಾರ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು, ಬ್ರಹ್ಮಕಲಶೋತ್ಸವ ಹಾಗೂ ಕಳಿಯಾಟ ಮಹೋತ್ಸವ ಅಧ್ಯಕ್ಷ ಹರಿನಾರಾ ಯಣ ಶಿರಂತಡ್ಕ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕುರುಪ್ ಉಬ್ರಂಗಳ, ಉಪಾಧ್ಯಕ್ಷ ಕೃಷ್ಣ ಮಣಿಯಾಣಿ ಸೀತಾಂಗೋಳಿ, ಕೋಶಾಧಿಕಾರಿ ಕುಂಞÂ್ಞ ಕಣ್ಣನ್ ಉಳಿಯ, ಆನಂದ ಕೆ. ಮವ್ವಾರು, ಸಾಂಸ್ಕøತಿಕ ಕಾರ್ಯಕ್ರಮ ಸಮಿತಿ ಅಧ್ಯಕ್ಷ ವಿಶ್ವನಾಥ ಬಳ್ಳಪದವು, ಅಖಿಲೇಶ್ ನಗುಮುಗಂ, ಸತೀಶನ್ ಉಬ್ರಂಗಳ, ಕಾರ್ಯದರ್ಶಿ ರಾಜೇಶ್ ಮಾಸ್ತರ್ 'ಉಬ್ರಂಗಳ ಉಪಸ್ಥಿತರಿದ್ದರು. ಈ ಸಂದರ್ಭ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ಸ್ವಾಮೀಜಿಯವರಿಗೆ ಮಾಹಿತಿ ನೀಡಲಾಯಿತು.