ಕಾಸರಗೋಡು: ನಗರದ ಜನರಲ್ ಆಸ್ಪತ್ರೆಯ ವೈದ್ಯ ದಂಪತಿಯ ಎರಡು ಕಾರುಗಳ ಗಾಜಿಗೆ ಕಲ್ಲು ಎತ್ತಿಹಾಕಿ ಕಿಡಿಗೇಡಿಗಳು ಹಾನಿಯೆಸಗಿದ್ದಾರೆ. ಡಾ. ಅಭಿಜಿತ್‍ದಾಸ್ ಅವರ ಹೋಂಡಸಿಟಿ ಹಾಗೂ ಇವರ ಪತ್ನಿ ಡಾ. ದಿವ್ಯಾ ಅವರ ಆಲ್ಟೋ ಕಾರು ಹಾನಿಗೀಡಾಗಿರುವುದು.
ಮಲಪ್ಪುರಂ ಪರಪ್ಪನಂಗಾಡಿ ನಿವಾಸಿಗಳಾದ ವೈದ್ಯ ದಂಪತಿ ಆರು ತಿಂಗಳ ಹಿಂದೆಯಷ್ಟೆ ಕಾಞಂಗಾಡಿನ ಉದಯಾಂಕುನ್ನುವಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಆರಂಭಿಸಿದ್ದರು. ಬುಧವಾರ ನಸುಕಿಗೆ ಕಾರುಗಳಿಗೆ ಹಾನಿಯೆಸಗಲಾಗಿದ್ದು, ಈ ಬಗ್ಗೆ ದಂಪತಿ ನೀಡಿದ ದೂರಿನನ್ವಯ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.