ಮಂಜೇಶ್ವರ: ವಾಮಂಜೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿರಚನೆ ಸಭೆ ನಡೆಯಿತು. ಮಂಜೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಉದ್ಘಾಟಿಸಿದರು. ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷರಾಗಿ ಶೇಖ್ ಉಸ್ಮಾನ್, ಉಪಾಧ್ಯಕ್ಷರಾಗಿ ಹನೀಫ್ ಎಂ. ಎಚ್, ಕಾರ್ಯದರ್ಶಿಯಾಗಿ ಶೇಖ್ ಮೊಯ್ದೀನ್ ಸಾಹಿಬ್, ಜೊತೆ ಕಾರ್ಯದರ್ಶಿಯಾಗಿ ಬಶೀರ್, ಕೋಶಾಧಿಕಾರಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಸಿಲ್ವಿಯಾ ಟೀಚರ್ ಹಾಗೂ ರಾಘವನ್ ಆಯ್ಕೆಯಾದರು. ಶಾಲಾ ಹಳೆವಿದ್ಯಾರ್ಥಿಗಳು, ಶಾಲಾ ಸಮೀಪದ ವಿವಿಧ ಕ್ಲಬ್‍ಗಳ ಪದಾಧಿಕಾರಿಗಳು, ಊರ ವಿದ್ಯಾಭಿಮಾನಿ ಬಂಧುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸುಬೈದಾ ಟೀಚರ್ ಸ್ವಾಗತಿಸಿ, ಅಖಿಲಾ ಟೀಚರ್ ವಂದಿಸಿದರು. ಮುಖ್ಯ ಶಿಕ್ಷಕಿ ಸಿಲ್ವಿಯಾ ಟೀಚರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿಯರಾದ ಸೌಮ್ಯ ಪ್ರಾರ್ಥನೆ ಹಾಡಿದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.