ತಿರುವನಂತಪುರಂ: ಹೇಮಾ ಸಮಿತಿ ವರದಿಗೆ ಸಂಬಂಧಿಸಿದಂತೆ ವಿಚಿತ್ರ ಪ್ರತಿಕ್ರಿಯೆ ನೀಡಿದ ಮಾಜಿ ನಟಿಯರಂತೆ ತನಗೂ ಕಿರುಕುಳ ಎದುರಿಸಬೇಕಾದ ಪ್ರಸಂಗಗಳು ಬಂದಿತ್ತು, ಆದರೆ ದೂರು ನೀಡಲಾರೆ ಎಂದು ಮಾಜಿ ಖ್ಯಾತನಟಿ ಶೀಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೇಮಾ ಸಮಿತಿಯ ಸದಸ್ಯೆಯಾಗಿರುವ ನಟಿಯರು ಪ್ರಸ್ತುತ ಬಹಿರಂಗಪಡಿಸಿದ ಎಲ್ಲವು ಕೇವಲ ಪ್ರದರ್ಶನವಾಗಿದೆ ಎಂದು ನಟಿ ಹೇಳಿದ್ದಾರೆ. .
ಈ ಹಿಂದೆಯೂ ಕಿರುಕುಳ ಇತ್ತು, ಕೆಲವರು ನಟಿಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ನನಗೆ ಗೊತ್ತಿದೆ ಎಂದು ಶೀಲಾ ಪ್ರತಿಕ್ರಿಯಿಸಿದ್ದಾರೆ. ಇಂದಿನ ಮಕ್ಕಳಿಗೆ ಮಾತನಾಡುವ ಧೈರ್ಯವಿದೆ. ಇನ್ನು ಮುಂದೆ ಸೆಟ್‍ನಲ್ಲಿ ಅಸಭ್ಯವಾಗಿ ವರ್ತಿಸಲು ಪುರುಷರು ಹೆದರುತ್ತಾರೆ ಎಂದು ಶೀಲಾ ಪ್ರತಿಕ್ರಿಯಿಸಿದ್ದು, ಈ ಹಿಂದೆಯೂ ಮಲಯಾಳಂ ಚಿತ್ರರಂಗದಲ್ಲಿ ಕಿರುಕುಳ ನಡೆಯುತ್ತಿದ್ದು, ಈ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಿಲ್ಲ. ಪ್ರಸ್ತುತ ಬಹಿರಂಗಪಡಿಸುವಿಕೆಗಳು ಕೇವಲ ಪ್ರದರ್ಶನವಾಗಿದೆ ಎಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇದೆಲ್ಲವನ್ನೂ ಬದಿಗೊತ್ತಿ ವಯನಾಡಿನತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮಲಯಾಳಂ ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳಿಂದಾಗಿ ಚಿತ್ರದಿಂದ ಹಿಂದೆ ಸರಿದಿದ್ದೇನೆ ಎನ್ನುತ್ತಾರೆ ನಟಿ ಸುವರ್ಣ. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಹಳ ಹಿಂದಿನಿಂದಲೂ ಟ್ರೆಂಡ್ ಆಗಿದೆ.
ಮೋಹನ್‍ಲಾಲ್ ಅವರು ಚಿತ್ರರಂಗದಲ್ಲಿ ಮಹಿಳೆಯರಿಗೆ ಬೆಂಬಲವಾಗಿರುವೆ ಎಂದು ಹೇಳಲು ಏಕೆ ಧೈರ್ಯ ಮಾಡುತ್ತಿಲ್ಲ ಎಂದು ಹಳೇ ಕಾಲದ ನಟಿ ಕಸ್ತೂರಿ ಸವಾಲು ಹಾಕಿದರು.
ಈ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿರುವ ರಾಧಿಕಾ ಹಾಗೂ ಶರ್ಮಿಳಾ, ಮೋಹನ್ ಲಾಲ್, ಸಿದ್ದಿಕ್, ಇಡವೇಳÀ ಬಾಬು, ರಿಯಾಜ್ ಖಾನ್ ಜತೆ ನಟಿಸಿದಾಗ ಕೆಟ್ಟ ಅನುಭವಗಳಾಗಿದ್ದರೂ ದೂರು ನೀಡಲು ತಯಾರಿಲ್ಲ ಎಂದು ಶರ್ಮಿಳಾ ಸ್ಪಷ್ಟಪಡಿಸಿದ್ದಾರೆ.