HEALTH TIPS

ಗರ್ಭಿಣಿ ಆತ್ಮಹತ್ಯೆ-ಪತಿಯ ಬಂಧನ

ಮಂಜೇಶ್ವರ: ಮೂರು ತಿಂಗಳ ಗರ್ಭಿಣಿ ಸಾವಿಗೆ ಸಂಬಂಧಿಸಿ ಆಕೆಯ ಪತಿಯನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೈವಳಿಕೆ ಪಂಚಾಯಿತಿ ಕಯ್ಯಾರು ಕನ್ನಟಿಪಾರೆಯ ಶಾಂತಿಯೋಡು ನಿವಾಸಿ ಜನಾರ್ದನ(39) ಬಂಧಿತ. ಈತನ ಪತ್ನಿ, ಮಂಗಳೂರು ವಾಮಂಜೂರು ಪಿಲಿಕುಳ ನಿವಾಸಿ ವಿಜೇತ(32)ಅವರ ಮೃತದೇಹ ಆ. 18ರಂದು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಂದು ಲಭಿಸಿದ ಡೆತ್ ನೋಟ್ ಆಧಾರದಲ್ಲಿ ಪತಿಯನ್ನು ಬಂಧಿಸಲಾಗಿದೆ. ವಿಜೇತ ಬರೆದಿದ್ದಾಳೆನ್ನಲಾದ ಪತ್ರವೊಂದು ಲಭಿಸಿದ್ದು, ಇದರಲ್ಲಿ,  ಪತಿ ತನಗೆ ನಿರಂತರ ಕಿರುಕುಳ ನೀಡುತ್ತಿರುವ ಬಗ್ಗೆ ಬರೆದುಕೊಂಡಿದ್ದರು. ಪತ್ರ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಸಮಗ್ರ ತನಿಖೆ ನಡೆಸಿದ ನಂತರ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries