ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಸಂಯೋಜಿತ ಶಿಕ್ಷಕರ ಶಿಕ್ಷಣ ಕಾರ್ಯಕ್ರಮದ (ಐಟಿಇಪಿ) ಎರಡನೇ ಬ್ಯಾಚ್ ಆರಂಭಿಸಲಾಯಿತು. ವಿಶ್ವವಿದ್ಯಾನಿಲಯದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಕಳೆದ ಶೈಕ್ಷಣಿಕ ವರ್ಷದಲ್ಲಿ ನಾಲ್ಕು ವರ್ಷಗಳ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ.
ಬಿ.ಎಸ್ಸಿ-ಬಿ.ಇಡಿ(ಭೌತಶಾಸ್ತ್ರ-ಪ್ರಾಣಿಶಾಸ್ತ್ರ), ಬಿ.ಎ. ಬಿ.ಇಡಿ (ಇಂಗ್ಲಿಷ್, ಅರ್ಥಶಾಸ್ತ್ರ), ಬಿ.ಕಾಂ-ಬಿ ಇಡಿ ವಿಶ್ವವಿದ್ಯಾನಿಲಯವು ಐದು ಕೋರ್ಸುಗಳನ್ನು ನಡೆಸುತ್ತಿದೆ. ವಿಶ್ವ ವಿದ್ಯಳಯದ ಸಾಬರ್‍ಮತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಭಾರ ಉಪಕುಲಪತಿ ಪ್ರೊ. ವಿನ್ಸೆಂಟ್ ಮ್ಯಾಥ್ಯೂ ನೂತನ ಬ್ಯಾಚ್ ಉದ್ಘಾಟಿಸಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿವಿಧ ವಿಷಯಗಳ ಏಕೀಕರಣದ ಆಧಾರದ ಮೇಲೆ ಕಲಿಕಾ ವಿಧಾನವನ್ನು ಪ್ರಸ್ತಾಪಿಸಲಾಗುತ್ತಿದ್ದು, ವಿಶ್ವವಿದ್ಯಾನಿಲಯವು ಪ್ರಾರಂಭದಿಂದಲೂ ಹೊಸ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಉಪಕುಲಪತಿಗಳು ವಿವರಿಸಿದರು. ಡೀನ್ ಅಕಾಡೆಮಿಕ್ ಪ್ರೊ. ಅಮೃತ್ ಜಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟ್ರಾರ್ ಡಾ. ಎಂಮುರಳೀಧರನ್ ನಂಬಿಯಾರ್, ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಪ್ರೊ. ರಾಜೇಂದ್ರ ಪಿಲಾಂಗಟ್ಟೆ, ಪ್ರೊ. ಮುಹಮ್ಮದುನ್ನಿ ಇಲ್ಯಾಸ್ ಮುಸ್ತಫಾ, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆ ಅಧ್ಯಕ್ಷ ಪ್ರೊ. ವಿ.ಪಿ. ಜೋಶಿತ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಮಂಜು ಪೆರುಪಿಲ್ ವಂದಿಸಿದರು.