ತಿರುವನಂತಪುರ: ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ವಿರುದ್ಧ ತನಿಖೆ ನಡೆಸಲು ಸರ್ಕಾರ ವಿಶೇಷÀ ತಂಡವನ್ನು ನೇಮಿಸಿದೆ.
ಡಿಜಿಪಿ ಶೇಖ್ ದರ್ವೇಶ್ ಸಾಹಿಬ್ ಅವರು ಆರೋಪಗಳ ತನಿಖೆ ನಡೆಸಲಿದ್ದಾರೆ. ಎಡಿಜಿಪಿ ವಿರುದ್ಧದ ತನಿಖೆಯಲ್ಲಿ ಕೆಳಹಂತದ ಅಧಿಕಾರಿಗಳೂ ಭಾಗಿಯಾಗಲಿದ್ದಾರೆ.
ಜುಲವರ್ತಿ ಸ್ಪರ್ಜನ್ ಕುಮಾರ್ (ಇನ್‍ಸ್ಪೆಕ್ಟರ್ ಜನರಲ್ ಪೆÇಲೀಸ್ ಮತ್ತು ಕಮಿಷನರ್ ಆಫ್ ಪೆÇಲೀಸ್, ತಿರುವನಂತಪುರಂ ನಗರ), ಥಾಮ್ಸನ್ ಜೋಸ್ (ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್
ಪೆÇಲೀಸ್, ತ್ರಿಶೂರ್ ರೇಂಜ್.) ಎ. ಶಾನವಾಸ್ (ಪೆÇಲೀಸ್ ಸೂಪರಿಂಟೆಂಡೆಂಟ್ (ಗುಪ್ತಚರ), ರಾಜ್ಯ ವಿಶೇಷ ವಿಭಾಗ) ಎಸ್.ಮಧುಸೂದನನ್ (ಪೆÇಲೀಸ್ ಅಧೀಕ್ಷಕರು, ಮೂರನೇ ವಿಭಾಗ, ತಿರುವನಂತಪುರಂ) ತನಿಖಾ ತಂಡದ ಸದಸ್ಯರು.
ಕಾನೂನು ಸುವ್ಯವಸ್ಥೆಯ ಉಸ್ತುವಾರಿ ವಹಿಸಿದ್ದ ಎಡಿಜಿಪಿ ಅವರ ಆರೋಪಗಳ ತನಿಖೆಗೆ ರಾಜಕೀಯ ಕಾರ್ಯದರ್ಶಿ ಪಿ.ಶಶಿ ಅವರು ತಮ್ಮ ಅಧೀನದಲ್ಲಿರುವ ಅಧಿಕಾರಿಗಳ ತಂಡಕ್ಕೆ ತನಿಖಾ ಕಾರ್ಯವನ್ನು ವಹಿಸಿರುವರು. ಅಜಿತ್ ಕುಮಾರ್ ಅವರನ್ನು ಕಂಡರೆ ಸೆಲ್ಯೂಟ್ ಹೊಡೆಯಬೇಕಾದ ಅಧಿಕಾರಿಗಳೇ ತನಿಖೆ ನಡೆಸಲಿರುವುದರಿಂದ ಟೀಕೆ ಬರಬಹುದು ಎಂದೂ ನಿರೀಕ್ಷಿಸಲಾಗಿದೆ.