ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 2025 ಮಾರ್ಚ್ 27 ರಿಂದ ಏಪ್ರಿಲ್ 7 ರ ತನಕ ನಡೆಯುವ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಸಂದರ್ಭ ಶ್ರೀ ಕ್ಷೇತ್ರದಲ್ಲಿ ನಡೆಯುವ ಭಜನಾ ಸೇವೆಯಲ್ಲಿ ಭಾಗವಹಿಸುವ ಭಜನಾ ತಂಡಗಳು 2024 ಅಕ್ಟೋಬರ್ 15ಕ್ಕೆ ಮುಂಚಿತವಾಗಿ ತಮ್ಮ ತಂಡದ ಪೂರ್ಣ ಮಾಹಿತಿ, ದೂರವಾಣಿ ಸಂಖ್ಯೆಯೊಂದಿಗೆ ದೇವಸ್ಥಾನದ ಬ್ರಹ್ಕ ಕಲಶೋತ್ಸವ ಕಛೇರಿಗೆ ಮಾಹಿತಿ ನೀಡಬೇಕಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (9633310938, 9388849933, 9495180294)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.